ಒಡಿಶಾ, ಸೆ 12(MSP): ಟ್ರಾಫಿಕ್ ನಲ್ಲಿ ಕಾಯುವುದೆಂದರೆ ಅದೇನೋ ಚಡಪಡಿಕೆ ವಾಹನ ಸವಾರರಿಗೆ. ಅದೇ ಟ್ರಾಫಿಕ್ನಲ್ಲಿ. ಸುಡುಬಿಸಿಲನ್ನು, ನಿರಂತರವಾಗಿ ಓಡಾಡುವ ವಾಹನಗಳನ್ನು, ವಾಹನ ಹೊಗೆಯನ್ನು, ಲೆಕ್ಕಿಸದೆ ದಿನವಿಡೀ ವಾಹನಗಳನ್ನು ನಿಯಂತ್ರಿಸುವ ಪೊಲೀಸರ ಪಾಡು ಹೇಗಿರಬೇಡ. ಆದ್ರೂ ಇದು ಟ್ರಾಫಿಕ್ ಪೊಲೀಸರಿಗೆ ನಿತ್ಯದ ಕರ್ತವ್ಯ.
ಸಹನೆಯನ್ನು ಪರೀಕ್ಷಿಸುವಂತಿರುವ ಟ್ರಾಫಿಕ್ನಲ್ಲಿ ಕೆಂಪು, ಹಸಿರು ದೀಪಗಳು ಕೇವಲ ಹತ್ತಾರು ಸೆಕುಂಡ್ ಕೆಟ್ಟು ನಿಂತರೂ ಸಾಕು, ಎಲ್ಲೆಡೆಯೂ ವಾಹನ ದಟ್ಟಣೆ ಮೀಟರ್ ಬಿಡಿ ಕಿಲೋ ಮೀಟರ್ ವರೆಗೂ ವಿಸ್ತರಿಸುತ್ತದೆ. ಹೀಗಾಗಿ ಹೆಚ್ಚಿನ ವಾಹನ ದಟ್ಟನೆ ಇರೋ ಕಡೆ ಪೊಲೀಸರೇ ನಿಂತು ಟ್ರಾಫಿಕ್ ನಿಯಂತ್ರಿಸುವುದು ಸಾಮಾನ್ಯ. ಇಲ್ಲೊಬ್ಬರು ಟ್ರಾಫಿಕ್ ನಿಯಂತ್ರಿಸುತ್ತಾರೆ. ಅದರೆ ನಿಂತು ಖಂಡಿತಾ ಅಲ್ಲ ,ಡ್ಯಾನ್ಸ್ ಮಾಡುತ್ತಾ...
ಒಡಿಶಾದ ಭುವನೇಶ್ವರದಲ್ಲಿ ಪ್ರತಿ ವಾಹನ ಸವಾರರಿಗೂ ಈ ವ್ಯಕ್ತಿ ಚಿರಪರಿಚಿತ. ಹ್ಯಾಂಡ್ ಸಿಗ್ನಲ್ ಮಾತ್ರ ಮಾಡದೆ ಈತ , ಡ್ಯಾನ್ಸ್ನಿಂದ ಟ್ರಾಫಿಕ್ ಕಂಟ್ರೋಲ್ ಮಾಡೋ ಮೂಲಕ ಸಖತ್ ಫೇಮಸ್ ಆಗಿದ್ದಾರೆ. ಹೋಮ್ ಗಾರ್ಡ್ ಸಿಬ್ಬಂದಿಯಾಗಿರುವ 33 ವರ್ಷದ ಪ್ರತಾಪ್ ಚಂದ್ರ, ತನ್ನ ವಿನೂತನ ಡ್ಯಾನ್ಸ್ ಸ್ಟೆಪ್ಸ್ ನಿಂದಲೇ ಟ್ರಾಫಿಕ್ ಕಂಟ್ರೋಲ್ ಮಾಡ್ತಾರೆ. ಟ್ರಾಫಿಕ್ ಪೊಲೀಸರು ಸೂಚನೆ ನೀಡುತ್ತಿದ್ದರೂ, ಕಂಡೂ ಕಾಣದಂತೆ ವಾಹನ ಚಲಾಯಿಸುತ್ತಿದ್ದ ವಾಹನ ಸವಾರರಂತು , ಈ ಟ್ರಾಫಿಕ್ ಪೊಲೀಸ್ ನ ನೃತ್ಯದ ಪ್ರಭಾವಕ್ಕೆ ಒಳಗಾಗಿದ್ದಾರೆ. ಭಿನ್ನ ರೀತಿಯಲ್ಲಿ ಪ್ರತಾಪ್ ನೀಡುವ ಸೂಚನೆಗಳ ಅನುಸಾರ ಜನರು ವಾಹನ ಸವಾರಿ ಮಾಡುತ್ತಿದ್ದು, ಟ್ರಾಫಿಕ್ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವರ ಡ್ಯಾನ್ಸ್ ಫುಲ್ ವೈರಲ್ ಆಗಿದ್ದು, ಫ್ಯಾನ್ಸ್ ಸಂಖ್ಯೆಯೂ ಹೆಚ್ಚಾಗಿದೆಯಂತೆ!