ಮಂಗಳೂರು, ಅ 5: ಕರ್ನಾಟಕದಲ್ಲಿ ಸಲಫಿ ಸಂಘಟನೆ ಇಸ್ಮಾಯಿಲ್ ಶಾಫಿ ಅವರ ಮಾತುಗಳೆಂದು ವೈರಲ್ ಆಗಿದ್ದ ಆಡಿಯೋ ತುಣುಕನ್ನು ಸ್ವತಃ ಸೌತ್ ಕರ್ನಾಟಕ ಸಲಫಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಇಸ್ಮಾಯಿಲ್ ಶಾಫಿ ಅವರು ಆಡಿಯೋ ತುಣುಕು ನಲ್ಲಿರುವ ಆ ಮಾತುಗಳು ತನ್ನದೇ, ಎಂದು ಒಪ್ಪಿಕೊಂಡಿದ್ದಾರೆ.ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ, ಆ ಸಂದರ್ಭ ನಮ್ಮ ಸಮುದಾಯದ ಯುವಕರಿಕೆ ಐಸಿಸ್ ಸಂಘಟನೆಯ ಮೋಸದ ಜಾಲಕ್ಕೆ ಬೀಳುವುದು ಬೇಡಾ ಎಂದು ಎಂದು ಎಚ್ಚರಿಸಿದ್ದೆ. ಜತೆಗೆ ಸಲಫಿ ಸಂಘಟನೆಯ ಮೇಲೆ ಇಲ್ಲಸಲ್ಲದ ಆರೋಪ ಹೋರಿಸಲಾಗುತ್ತದೆ , ಇವೆಲ್ಲಾ ಕಾರಣಗಳಿಂದ ಉಪದೇಶ ನೀಡಿದ್ದು ನಿಜ . ಇದೇ ಆ ಆಡಿಯೋ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಟಿ ಆರ್ ಸುರೇಶ್ ಕುಮಾರ್, ಆಡಿಯೋ ಬ್ಯಾರಿ ಭಾಷೆಯಲ್ಲಿರುವ ಕಾರಣ ಅದನ್ನು ಕನ್ನಡಕ್ಕೆ ಅನುವಾದ ಮಾಡಲಾಗುತ್ತ್ದೆ. ಆ ಬಳಿಕ ಸತ್ಯಾಸತ್ಯತೆ ಪರಿಶೀಲಿಸಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.