ಬಂಟ್ವಾಳ, ಸೆ.11 (MSP): ಹಿಂದೂಗಳ ಧಾರ್ಮಿಕ ಹಕ್ಕಿನ ಮೇಲೆ ದಬ್ಬಾಳಿಕೆ ಯನ್ನು ಖಂಡಿಸಿ ಮತ್ತು ಹಿಂದೂಗಳ ಧಾರ್ಮಿಕ ಆಚರಣೆಯಲ್ಲಿ ಒಂದಾದ ಗಣೇಶೋತ್ಸವಕ್ಕೆ ವಿಧಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಹಿಂದೂ ಜಾಗರಣಾ ವೇದಿಕೆ ಘಟಕ, ಸೆ,೧೧ರ ಮಂಗಳವಾರದಂದು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂಥ್ ಅದೇಶವನ್ನು ಹಿಂದೂ ಜಾಗರಣಾ ವೇದಿಕೆ ಖಂಡಿಸುತ್ತದೆ. ಹಿಂದೂ ವಿರೋಧಿ ಅಧಿಕಾರಶಾಹಿಗಳು ಈ ಹಬ್ಬವನ್ನು ಹತ್ತಿಕ್ಕಲು ಹಲವು ಅಡಚಣೆಗಳನ್ನು ಹೇರುತ್ತಿದ್ದು ರಾಜ್ಯದ ಎಡಿಜಿಪಿ ರಾಷ್ಟ್ರೀಯ ಹಿಂದೂ ಹಬ್ಬದ ವೈಭವವನ್ನು ಹಾಳು ಮಾಡಲು ಹೊರಟಿರುವುದು ಖಂಡನೀಯ .ವಿಧಿಸಿರುವ ಎಲ್ಲಾ ನಿರ್ಬಂಧಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಆ ಮೂಲಕ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಗೆ ಮುಕ್ತ ಅವಕಾಶವನ್ನು ಕಲ್ಪಿಸಬೇಕು ಮನವಿಯ ಮೂಲಕ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಜಿಲ್ಲಾ ಅಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ, ತಾಲೂಕು ಅದ್ಯಕ್ಷ ಚಂದ್ರ ಕಲಾಯಿ, ಮಹಿಳಾ ಘಟಕದ ಅದ್ಯಕ್ಷೆ ಬಬಿತಾ ಕೋಟ್ಯಾನ್, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಮಾಜಿ ತಾ.ಪಂ.ಉಪಾಧ್ಯಕ್ಷ ದಿನೇಶ್ ಅಮ್ಟೂರು, ಪ್ರಮುಖರಾದ ಶರಣ್ ಕಾಮಾಜೆ, ಬಾಲಕೃಷ್ಣ ಕಲಾಯಿ, ಮಚ್ವೇಂದ್ರನಾಥ ಸಾಲಿಯಾನ್, ಗಣೇಶ್ ಶೆಟ್ಟಿ ಕಲ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.