ಮಂಗಳೂರು, ಸೆ 10(SM): ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಕ್ಕೆ ಬೆಲೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಬಂದ್ ನಡೆಸಿದೆ. ಆದರೆ ಬಂದ್ ಹೆಸರಲ್ಲಿ ಬಲಾತ್ಕಾರ ಮತ್ತು ಗೂಂಡಾಗಿರಿಯ ಪ್ರವೃತ್ತಿ ನಡೆದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜನರ ರಕ್ಷಣೆ ಮಾಡಬೇಕಾದ ಸರಕಾರವೇ ಬಂದ್ ನಡೆಸಲು ಬೆಂಗಾವಲಾಗಿದೆ. ಗೃಹ ಇಲಾಖೆ, ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿದ ರಾಜ್ಯದಲ್ಲಿ ಬಂದ್ ನಡೆಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಬಲವಂತವಾಗಿ ಬಂದ್ ನಡೆಸಲಾಗಿದ್ದು, ಗೂಂಡಾಗಿರಿಯ ಮೂಲಕ ಬಂದ್ ಮಾದಲಾಗಿದೆ. ಇನ್ನೂ ಉಡುಪಿಯಲ್ಲಿ ಬಿಜೆಪಿ ನಾಯಕರ ಮೇಲೆ ಹಲ್ಲೆ ಮಾಡಲಾಗಿದ್ದು, ರಾಜ್ಯದಲ್ಲಿ ಗಲಭೆ ಸೃಷ್ಠಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದ ಸೆಸ್ ಅನ್ನು ಹಿಂದಕ್ಕೆ ತೆಗಿಯಿರಿ ಆಗ ಎಲ್ಲಾ ಸರಿಯಾಗುತ್ತದೆ. ಅದನ್ನು ಬಿಟ್ಟು ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು. ಇನ್ನು ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಕಾರಿನ ಮೇಲೆ ಕಲ್ಲು ತೂರಾಟ ಮೂಲಕ ಹತ್ಯೆ ಯತ್ನ ನಡೆದಿದೆ. ಆದರೆ ಪೊಲೀಸರು ಕಲ್ಲು ತೂರಾಟ ಮಾಡಿದ ಎಷ್ಟು ಮಂದಿಯನ್ನು ಬಂದಿಸಿದ್ದಾರೆ? ಸರಕಾರ ಗಲಭೆಗಳಿಗೆ ಪ್ರೇರಣೆ ನೀಡುವ ಮೂಲಕ ಅರಾಜಕತೆ ಸೃಷ್ಠಿಸಿದೆ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.