Karavali
ಕುಂದಾಪುರ: ನಗರಕ್ಕೆ ಮಾತ್ರ ಸೀಮಿತವಾಯಿತು ’ಬಂದ್’ ಬಿಸಿ
- Mon, Sep 10 2018 03:51:26 PM
-
ಕುಂದಾಪುರ, ಸೆ 10 (MSP) : ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ನೀಡಿದ್ದ ಭಾರತ್ ಬಂದ್ ಸಂದರ್ಭ ಕೆಲವೊಂದು ಸಣ್ಣ ಪುಟ್ಟ ಘಟನೆಗಳನ್ನು ಹೊರತು ಪಡಿಸಿ ಕುಂದಾಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ಬೆಳಿಗ್ಗೆಯಿಂದಲೆ ಬಂದ್ನ ಬಿಸಿ ನಾಗರಿಕರಿಗೆ ತಟ್ಟಿತ್ತು. ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್ಸುಗಳು ರಸ್ತೆಗೆ ಇಳಿಯದೆ ಇದ್ದ ಕಾರಣ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕಾಂಗ್ರೆಸ್ ಹಾಗೂ ಕಮುನಿಷ್ಟ್ ಸಂಘಟನೆಗಳಿಗೆ ಸೇರಿದ್ದ ರಿಕ್ಷಾ ಹಾಗೂ ಇತರ ಬಾಡಿಗೆ ವಾಹನಗಳು ಬಂದ್ ಬೆಂಬಲಿಸಿ ರಸ್ತೆಗೆ ಇಳಿದಿರಲಿಲ್ಲ. ಆದರೆ ಬಿಜೆಪಿ ಬೆಂಬಲಿತ ಸಂಘಟನೆಗಳಿಗೆ ಸೇರಿದ್ದ ವಾಹನಗಳು ಎಂದಿನಂತೆ ಓಡಾಟ ನಡೆಸಿದ್ದವು. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದ ಕಾರಣ ನಗರದಲ್ಲಿ ವಿದ್ಯಾರ್ಥಿಗಳ ಓಡಾಟ ಇರಲಿಲ್ಲ. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರೂ ಅಲ್ಲಿ ಪ್ರತಿ ದಿನದಂತೆ ಜನಸಂದಣೆ ಇರಲಿಲ್ಲ. ಬೆಳಿಗ್ಗೆ ಕಾಂಗ್ರೆಸ್ಕಾರ್ಯಕರ್ತರ ಮನವಿಗೆ ಬಂದ್ಮಾಡಿದ್ದ ವಾಣಿಜ್ಯ ಬ್ಯಾಂಕ್ಗಳು11.30 ರ ನಂತರ ಕಚೇರಿಯ ಬಾಗಿಲನ್ನು ತೆರೆದು ವಹಿವಾಟನ್ನು ಆರಂಭಿಸಿದೆ. ನಗರದ ಎಲ್ಲ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದೂ, ಬಂದ್ ಬಿಸಿಯಿಂದಾಗಿ ಹೊರ ರೋಗಿಗಳ ವಿಭಾಗದಲ್ಲಿ ಹಾಗೂ ರೋಗಿಗಳ ಭೇಟಿಗೆ ಬರುವವರ ಸಂಖ್ಯೆ ಕಡಿಮೆಯಾಗಿತ್ತು.ಬಲವಂತದ ಬಂದ್ಗೆ ಆಕ್ಷೇಪ
ನಗರದ ವೆಂಕಟರಮಣ ದೇವಸ್ಥಾನದ ಬಳಿಯಲ್ಲಿನ ಅಂಗಡಿಯೊಂದನ್ನು ಬಲವಂತದಿಂದ ಮುಚ್ಚುವ ಪ್ರಯತ್ನ ನೆಡೆದಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಬಂದ್ಕರೆಗೆ ಸ್ಪಂದಿಸುವುದು ಬಿಡುವುದು ನಾಗರಿಕರ ಹಕ್ಕು, ಯಾವುದೆ ಕಾರಣದಿಂದ ಬಲವಂತದ ಬಂದ್ ನಡೆಸುವುದು ಸರಿಯಲ್ಲ. ಯಾರೇ ಸಾರ್ವಜನಿಕರು ಬಂದ್ಕರೆಯನ್ನು ಬೆಂಬಲಿಸಿ ಸ್ವಯಂ ಪಾಲ್ಗೊಳ್ಳುತ್ತಾರೆ ಎಂದಾದರೆ ನಮ್ಮ ಆಕ್ಷೇಪವಿಲ್ಲ. ಆದರೆ ಬಲವಂತದ ಬಂದ್ ನಡೆಸಿದರೆ ಅದಕ್ಕೆ ನಾವು ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಘಟನೆಯೂ ನಡೆಯಿತು.
ಬೆಳಿಗ್ಗೆ ನಗರದಲ್ಲಿ ಮೆರವಣಿಗೆ ನಡೆಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ಪಕ್ಷದ ಕಾರ್ಯಕರ್ತರು ಅಂಗಡಿ-ಮುಗ್ಗಟ್ಟುಗಳನ್ನು ಹಾಗೂ ವಾಣಿಜ್ಯ ಬ್ಯಾಂಕ್ಗಳನ್ನು ಬಂದ್ ಮಾಡುವಂತೆ ಮಾಡಿಕೊಂಡಿದ್ದ ಮನವಿಗೆ ಸ್ಪಂದಿಸಿ ಬಹುತೇಕ ವಾಣಿಜ್ಯ ಮಳಿಗೆಗಳು ಮುಚ್ಚಿತ್ತು. ಆದರೆ ಬಲವಂತದ ಬಂದ್ ಆಕ್ಷೇಪಿಸಿ ಬಿಜೆಪಿ ಕಾರ್ಯಕರ್ತರು ಮಳಿಗೆಗಳನ್ನು ಪುನ: ತೆರೆಯಲು ಮನವಿ ಮಾಡಿದ್ದರಿಂದ ಬೆರಳೆಣಿಕೆಯ ಅಂಗಡಿಗಳು ಹಾಗೂ ವಾಣಿಜ್ಯ ಬ್ಯಾಂಕ್ಗಳು ಪುನ: ವಹಿವಾಟು ಆರಂಭಿಸಿದೆ.
ನಗರಕ್ಕೆ ಸಿಮೀತವಾದ ’ಬಂದ್’ ಬಿಸಿ
ಕುಂದಾಪುರ ನಗರದಲ್ಲಿ ಬಂದ್ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ನಗರ ವ್ಯಾಪ್ತಿಯ ಹೊರಗಿನ ಭಾಗಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಟೇಶ್ವರ, ಬಸ್ರೂರು, ಹಂಗಳೂರು ಮುಂತಾದ ಕಡೆಗಳಲ್ಲಿ ಬಸ್ಸು ಹಾಗೂ ಶಿಕ್ಷಣ ಸಂಸ್ಥೆಗಳು ಮುಚ್ಚಿರುವುದು ಹೊರತು ಪಡಿಸಿ ಜನಜೀವನ ಸಾಮಾನ್ಯವಾಗಿತ್ತು.
ಪೊಲೀಸರ ಹದ್ದಿನ ಕಣ್ಣುಬಂದ್ಕರೆಯನ್ನು ಬೆಂಬಲಿಸುವ ಹಾಗೂ ಬಲವಂತದ ಬಂದ್ಕರೆಯನ್ನು ವಿರೋಧಿಸುವ ಎರಡು ಪ್ರಬಲ ಗುಂಪುಗಳ ಪರ ಹಾಗೂ ವಿರೋಧದ ನಡೆಯನ್ನು ಸಮರ್ಥವಾಗಿ ನಿಯಂತ್ರಿಸಿದ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಬಿ.ಪಿ.ದಿನೇಶ್ಕುಮಾರ, ಸರ್ಕಲ್ಇನ್ಸ್ನ್ಸ್ನ್ಸ್ಪೆಕ್ಟರ್ಮಂಜಪ್ಪ ಹಾಗೂ ಎಸ್.ಐ ಹರೀಶ್ಕುಮಾರ ಅವರ ನೇತ್ರತ್ವದ ತಂಡ ನಗರದಲ್ಲಿ ಶಾಂತಿ ಭಂಗವಾಗದಂತೆ ಹದ್ದಿನ ಕಣ್ಗಾವಲು ನಡೆಸಿದೆ. ಬಂದ್ಗೆ ಮನವಿ ಮಾಡುವ ವೇಳೆ ಹಾಗೂ ಅಂಗಡಿ ಮಳಿಗೆಗಳನ್ನು ಮತ್ತೆ ತೆರೆಯುವ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆದರೂ, ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಂದಾಪುರ ಕಾಂಗ್ರೆಸ್ಬ್ಲಾಕ್ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಪುರಸಭೆಯ ಸದಸ್ಯರಾದ ನಿತ್ಯಾಂದ ಕೆ.ಜಿ, ದೇವಕಿ ಪಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ, ಪಕ್ಷದ ಪ್ರಮುಖರಾದ ಜೇಕಬ್ಡಿಸೋಜಾ, ವಿಕಾಸ್ ಹೆಗ್ಡೆ, ಹಾರೂನ್ಸಾಹೇಬ್, ಹರಿಪ್ರಸಾದ್ಶೆಟ್ಟಿ ಬಿದ್ಕಲ್ಕಟ್ಟೆ, ಚಂದ್ರ ಎ ಅಮೀನ್, ಗಣೇಶ್ಶೇರುಗಾರ ಮುಂತಾದವರು ಪ್ರತಿಭಟನೆಯಲ್ಲಿ ಇದ್ದರು.
ದಿನದಿಂದ ದಿನಕ್ಕೆ ಮೋದಿ ಸರ್ಕಾರ ಹೆಚ್ಚಿಸುತ್ತಿರುವ ತೈಲ್ಬೆಲೆಯಿಂದಾಗಿ ದೇಶದ ಸಾಮಾನ್ಯ ಜನರು ಹೈರಾಣಾಗಿ ಹೋಗಿದ್ದಾರೆ. ಬಂದ್ಮೂಲಕ ಸಾಮಾನ್ಯ ಜನರ ಆಕ್ರೊಶ ಹೊರ ಹಾಕುವ ಪ್ರಯತ್ನ ನಡೆದಿದೆ. ಮಲ್ಯಾಡಿ ಶಿವರಾಮ್ಶೆಟ್ಟಿ. ಬ್ಲಾಕ್ಕಾಂಗ್ರೆಸ್ಸಮಿತಿ ಅಧ್ಯಕ್ಷರು.ಕಾಂಗ್ರೇಸ್ ವಿರುದ್ದ ಪ್ರತಿಭಟಿಸಿದ ಬಿಜೆಪಿ
ಕುಂದಾಪುರದಲ್ಲಿ ಕಾಂಗ್ರೆಸ್ ಬಲವಂತದಿಂದ ಬ್ಯಾಂಕ್ ಹಾಗೊ ಅಂಗಡಿಗಳನ್ನು ಮುಚ್ಚಿಸಿದ್ದಾರೆ ಎಂದು ಆರೋಪಿಸಿ ಕುಂದಾಪುರ ಬಿಜೆಪಿಯವರು ಕುಂದಾಪುರದ ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ್ದಾರೆ .ಈ ಹಿನ್ನಲೆಯಲ್ಲಿ ಬಿಜೆಪಿ ಮುಖಂಡರು ಹಾಗೊ ಕಾರ್ಯಕರ್ತರು ಪ್ರತಿಭಟಿಸಿ ಬಲವಂತವಾಗಿ ಮುಚ್ಚಿದ ಅಂಗಡಿ ಹಾಗೊ ಬ್ಯಾಂಕ್ ಗಳನ್ನು ತೆರೆಯುವಂತೆ ಆಗ್ರಹಿಸಿದರು. ಕಾಂಗ್ರೆಸ್ನ ಗೂಂಡಾ ವರ್ತನೆ ಸರಿಯಲ್ಲ ಎಂದು ಆಪಾದಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಹಾಗೊ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು ಹಾಗೊ ಬಲವಂತವಾಗಿ ಬಂದ್ ಮಾಡಲು ಅವಕಾಶ ಕೊಡುದಿಲ್ಲ ಎಂದ ಬಳಿಕ ಬಿಜೆಪಿ ಮುಖಂಡರು ಕಾರ್ಯಕರ್ತರು ಪ್ರತಿಭಟನೆ ಯಿಂದ ಹಿಂದೆ ಸರಿದರು. ಪ್ರತಿಭಟನೆಯಲ್ಲಿ ಕಾಡುರು ಸುರೇಶ್ ಶೆಟ್ಡಿ.ಸುನಿಲ್ ಹೆರಿಕುದ್ರು.ಭಾಸ್ಕರ ಬಿಲ್ಲವ.ಸಂತೋಷ ಶೆಟ್ಟಿ.ದಿವಾಕರ ಖಡ್ಗಿ ಮೊದಲಾದವರು ಉಪಸ್ಥಿತರಿದ್ದರು
ಕುಮಾರಸ್ವಾಮಿ ಬೆಲೆ ಏರಿಕೆ ಮಾಡದೆ ಇದ್ದಾಗ ಪ್ರತಿಭಟನೆ ಮಾಡದೆ ಇದ್ದ ಕಾಂಗ್ರೆಸ್ನ ಗೂಂಡಾಗಳು ಬಲಾತ್ಕಾರವಾಗಿ ಪೊಲೀಸರ ಮಾತನ್ನು ಲೆಕ್ಕಿಸದೆ ಬಂದ್ಮಾಡುತ್ತಿರುವುದು ಖಂಡನೀಯ. ಬಲಾತ್ಕಾರದ ಬಂದ್ನ ವಿರುದ್ದ ಜನರಿಗೆ ರಕ್ಷಣೆ ನೀಡಲು ಬಿಜೆಪಿ ಬದ್ದವಾಗಿದೆ. ಸುರೇಶ್ಶೆಟ್ಟಿ ಕಾಡೂರು. ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷರು.