ಮಂಗಳೂರು, ಮಾ. 29 (DaijiworldNews/SM): ‘ಪೊಲೀಸ್ ಇಲಾಖೆಯಲ್ಲಿ ನಮಗೆ ಫಿಟ್ ಪೊಲೀಸರ ಅಗತ್ಯವಿದೆ. ಇದರಿಂದಾಗಿ ವೇಗವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಫಿಟ್ನೆಸ್ ಶಿಬಿರದ ಸಮಾರೋಪ ಸಮಾರಂಬದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ವಯಸ್ಸಾದಂತೆ, ನಮ್ಮ ತೂಕವು ಹೆಚ್ಚಳವಾಗಿ ಸುದೀರ್ಘ ಸಮಯ ಫಿಟ್ನೆಸ್ ನಿಂದ ಇರಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ದೇಹವನ್ನು ಸಮರ್ಥವಾಗಿರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಕೈಗೊಂಡ ಹೆಜ್ಜೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ ಎಂದರು.
ಪ್ರತಿಯೊಬ್ಬ ಪೊಲೀಸರು ಮತ್ತು ಮಹಿಳೆಯರು ಫಿಟ್ನೆಸ್ ಶಿಬಿರಗಳಲ್ಲಿ ಭಾಗಿಯಾಗಬೇಕು ಎಂದು ನಾನು ಭಾವಿಸುತ್ತೇನೆ. ನಾನು ಬೆಂಗಳೂರಿಗೆ ತಲುಪಿದ ನಂತರ ಕರ್ನಾಟಕ ಪೊಲೀಸರಿಗೆ ಇಂತಹ ಉಚಿತ ಶಿಬಿರಗಳನ್ನು ನಡೆಸಲು ಸುತ್ತೋಲೆ ತರುತ್ತೇನೆ, ಇದರಿಂದ ಪೊಲೀಸರು ಸ್ಲಿಮ್ ಆಗಿರುತ್ತಾರೆ ಮತ್ತು ನಮ್ಮ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸಲು ಸಮರ್ತರಾಗಲಿದ್ದಾರೆ ಎಂದರು.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ‘ನಾವು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಮತ್ತು ಮಹಿಳೆಯರಿಗಾಗಿ ಒಂದು ತಿಂಗಳ ಕಾಲ ಪೊಲೀಸ್ ಫಿಟ್ನೆಸ್ ಶಿಬಿರವನ್ನು ನಡೆಸಿದ್ದೆವು. ಜೀವನ ಶೈಲಿಯಿಂದಾಗಿ ಕೆಲವು ಪೊಲೀಸರು ಬೊಜ್ಜು ಹೊಂದಿದ್ದರು. ಆದ್ದರಿಂದ ನಾವು ಪೋಲಿಸ್ ಫಿಟ್ನೆಸ್ ಶಿಬಿರವನ್ನು 90 ಕ್ಕಿಂತ ಹೆಚ್ಚು ತೂಕ ಹೊಂದಿದ್ದ ಪುರುಷ ಸಿಬ್ಬಂದಿಗಳು ಮತ್ತು 70 ಕ್ಕಿಂತ ಹೆಚ್ಚು ತೂಕ ಹೊಂದಿದ್ದ ಮಹಿಳಾ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದೆವು. ಕಳೆದ ಒಂದು ತಿಂಗಳಲ್ಲಿ ತೂಕ ಇಳಿಕೆ ಸೇರಿದಂತೆ ಫಿಟ್ನೆಸ್ನಲ್ಲಿ ವಿವಿಧ ಸುಧಾರಣೆಗಳು ಕಂಡುಬಂದಿವೆ ಎಂದರು.
ಇನ್ನು ಕಾನೂನು ಸುವ್ಯವಸ್ಥೆ ಡಿಸಿಪಿ ಹರಿರಾಮ್ ಶಂಕರ್ ಮಾತನಾಡಿ, 'ಮಾರ್ಚ್ 1 ರಿಂದ ಮಾರ್ಚ್ 29 ರವರೆಗೆ ಒಂದು ತಿಂಗಳ ಪೊಲೀಸ್ ಫಿಟ್ನೆಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಒಂದು ತಿಂಗಳ ಪೊಲೀಸ್ ಫಿಟ್ನೆಸ್ ಅವಧಿಯಲ್ಲಿ 26 ಮಹಿಳಾ ಸಿಬ್ಬಂದಿಗಳು ಸೇರಿದಂತೆ 76 ಮಂದಿ ಪೊಲೀಸರು ಭಾಗವಹಿಸಿದ್ದರು. ಫಿಟ್ನೆಸ್ ಕಾರ್ಯಕ್ರಮವು ಯೋಗ, ಡ್ರಿಲ್ ಪ್ರಾಕ್ಟೀಸ್, ತರಬೇತಿ ಅವಧಿಗಳು, ಹಲವಾರು ಕಿಲೋಮೀಟರ್ ನಡಿಗೆಯೊಂದಿಗೆ ಪ್ರಾರಂಭವಾಯಿತು. ಪೊಲೀಸರು ಮತ್ತು ಮಹಿಳೆಯರು 1.4 ಕೆಜಿಯಿಂದ 10.5 ಕೆಜಿ ವರೆಗೆ ತೂಕ ಇಳಿಕೆಯನ್ನು ಕಂಡಿದ್ದಾರೆ ಎಂದರು.