ಕಾರ್ಕಳ, ಸೆ10 (MSP): ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಪಕ್ಷಗಳು ಕರೆ ನೀಡಿದ ಭಾರತ ಬಂದ್ಗೆ ಕಾರ್ಕಳ ತಾಲೂಕು ಬಹುತೇಕ ಯಶಸ್ಸು ಕಂಡಿದೆ.ಬೆಳಿಗ್ಗಿನಿಂದಲೇ ಖಾಸಗಿ ಹಾಗೂ ಸರಕಾರಿ ಬಸ್ಗಳ ಓಡಾಟ ಮೊಟಕು ಗೊಳಡಿರುವುದರಿಂದ ಪ್ರಯಾಣಿಕರು ಸಂಕಷ್ಟಕ್ಕೊಳಗಾಗಬೇಕಾಯಿತು. ದೈನಂದಿನ ಕೆಲಸ ಕಾರ್ಯಕ್ಕೆ ತೆರಳಬೇಕಾದವ ಹೆಚ್ಚಿನವರು ತಮ್ಮ ಕೆಲ ಕಾರ್ಯಕ್ಕೆ ಗೈರುಹಾಜರಿ ಹಾಕಿರುವುದು ಕಂಡು ಬಂತು. ಕೆಲವರು ಖಾಸಗಿ ವಾಹನಗಳಲ್ಲಿ ದುಂದು ವೆಚ್ಚ ಭರಿಸಿ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು.
ರಿಕ್ಷಾಗಳಿಗೆ ಸುಗ್ಗಿ
ಕಳೆದ ಕೆಲವು ವರ್ಷಗಳ ಹಿಂದೆ ಪ್ರತಿ ಮಳೆಗಾಲ ಕಳೆಯುತ್ತಿದ್ದಂತೆ ರಸ್ತೆ ದುರಸ್ಥಿ ಹಾಗೂ ಪೆಟ್ರೋಲ್ ದರ ಇಳಿಸುವಂತೆ ಬಂದ್ಗೆ ರಿಕ್ಷಾ ಚಾಲಕ ಮಾಲಕರ ಸಂಘ ಕರೆ ನೀಡಲಾಗುತ್ತಿತ್ತು. ಇವತ್ತಿನ ಬಂದ್ಗೆ ರಿಕ್ಷಾ ಚಾಲಕ ಮಾಲಕರ ಸಂಘದವರು ಸ್ವಂದನೆ ನೀಡದೇ ಇರುವುದು ಕಂಡು ಬಂದಿದೆ. ಬೆಳಿಗ್ಗಿನಿಂದಲೇ ಕಾರ್ಕಳ ಬಸ್ ನಿಲ್ದಾಣ ಮುಂಭಾಗದಲ್ಲಿ ರಿಕ್ಷಾಗಳು ಕ್ಯೂ ಕಂಡು ಬಂದಿತ್ತಾದರೂ ನಿರೀಕ್ಷೆ ಮಟ್ಟದಲ್ಲಿ ಬಸ್ ಪ್ರಯಾಣಿಕರು ಇಲ್ಲದೇ ಕಂಗಾಲಾಗಿದ್ದರು.
ಹೋಟೆಲ್ಗಳು ಅಂಶಿಕ ಬಂದ್
ಬೆಳಿಗ್ಗಿನ ಜಾವದಲ್ಲಿ ಕಾರ್ಯ ನಿರ್ವಹಿಸಿದ ಹೋಟೆಲ್ಗಳು ಸಮಯ ಕಳೆಯುತ್ತಿದ್ದಂತೆ ಗ್ರಾಹಕರ ಕ್ಷೀಣಿಸಿಕೊಂಡಿರುವುದರಿಂದ ಬಾಗಿಲಿಗೆ ಬೀಗ ಜಡಿದ ಪ್ರಸಂಗಗಳು ನಡೆದಿದೆ. ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದ ಅಂಗಡಿಗಳು ನಿಗದಿತ ವೇಳಾವಧಿಯಲ್ಲಿ ತೆರೆಯದೇ ಇರುವುದು ಕಂಡು ಬಂತು.
ಕಾಂಗ್ರೆಸ್ನಿಂದ ಮೆರವಣಿಗೆ
ಭಾರತ ಬಂದ್ಗೆ ಕರೆ ನೀಡಿದ ಪ್ರತಿಪಕ್ಷಗಳಲ್ಲಿ ಪ್ರಮುಖ ಪಕ್ಷವಾದ ಕಾಂಗ್ರೆಸ್ನ ಯುವ ಘಟಕವು ನಗರದ ಅನಂತ ಶಯನದಿಂದ ಬಸ್ ನಿಲ್ದಾಣದ ವರೆಗೆ ಮೆರವಣಿಗೆ ನಡೆಸಿತು. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ತೆರೆದಿದ್ದ ಕೆಲವು ಅಂಗಡಿಗಳನ್ನು ಬಂದ್ ಮಾಡುವಂತೆ ವಿನಂತಿಸಿದರು. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಆಯಾಕಟ್ಟು ಜಾಗದಲ್ಲಿ ಪೊಲೀಸ್ ಭದ್ರತೆ ಏರ್ಪಡಿಲಾಗಿದೆ.
ಸಾಮಾನ್ಯ ಸಭೆ ರದ್ದು
ಪೂರ್ವ ನಿಗದಿಯಂತೆ ನಡೆಯಬೇಕಾಗಿದ್ದ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯು ಹಠಾತ್ ರದ್ದಾಗಿದೆ. ಸೋಮವಾರ ಬೆಳಿಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ. ಹರ್ಷಾ ಈ ವಿಚಾರವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.