ಮಂಗಳೂರು, ಮಾ.28 (DaijiworldNews/HR): ಮಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಕೇರಳದ ಕಾಸರಗೋಡಿನ ಚೆರೂರ್ ಮೂಲದವರಾದ ಫೌಸಿಯಾ ಮಿಸ್ಸಿರಿಯಾ ಮೊಯಿದೀನ್ ಕುನ್ಹಿ ಅವರು ತನ್ನ ಪತಿ ಮೊಯಿದೀನ್ ಕುನ್ಹಿ ಚೆರೂರ್ ಹಾಗೂ 4 ಮಕ್ಕಳೊಂದಿಗೆ ದುಬೈನಿಂದ ಬರುತ್ತಿರುವ ಏರ್ ಇಂಡಿಯಾ ವಿಮಾನದಿಂದ ಇಳಿದಿದ್ದು, ಅಲ್ಲಿಂದ ಮಹಿಳೆಯು ವಿಶೇಷವಾಗಿ ವಿನ್ಯಾಸಗೊಳಿಸಿದ ಒಳ ಉಡುಪಿನಲ್ಲಿ ಮರೆಮಾಚುವ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಇನ್ನು 39.48 ಲಕ್ಷ ರೂ.ಗಳ ಮೌಲ್ಯದ ನಿವ್ವಳ ತೂಕ 851 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಕಾರ್ಯಾಚರಣೆಯ ನೇತೃತ್ವವನ್ನು ಅವಿನಾಶ್ ಕಿರಣ್ ರೊಂಗಾಲಿ ಐಆರ್ಎಸ್ ವಹಿಸಿದ್ದರು.