ಮಂಗಳೂರು, ಸೆ 9 (MSP): ಮಂಗಳೂರಿನ ಪ್ರಮುಖ ವೃತ್ತ ಲೇಡಿಹಿಲ್ ಸರ್ಕಲ್ಗೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲವು ಶಾಸಕ ವೇದವ್ಯಾಸ ಕಾಮತ್ ಅವರಿಗೆ ಸೆ 09 ರ ಶನಿವಾರ ಮನವಿ ಸಲ್ಲಿಸಿತು.
ಇದೀಗ ಇರುವ ಹೆಸರು ಬ್ರಿಟೀಷರ ಆಳ್ವಿಕೆ ಕಾಲದಲ್ಲಿ ಮಾಡಲಾಗಿದ್ದು ,ಪ್ರಸ್ತುತ ವಿಶ್ವ ವಿಖ್ಯಾತ ಕುದ್ರೋಳಿ ದಸರಾ ನವದುರ್ಗೆಯರ ಮೆರವಣಿಗೆ ಈ ವೃತ್ತ ಬಳಸಿ ಹೋಗುತ್ತದೆ. ನಗರ ಪ್ರವೇಶದ ಪ್ರಮುಖ ವೃತ್ತವೂ ಆಗಿದೆ. ಒಂದೇ ಜಾತಿ ಒಂದೇ ಮತ ಒಂದೇ ದೇವರೆಂದು ಪ್ರತಿಪಾದಿಸಿದ ಮಹಾ ಮಾನವತಾವಾದಿಯ ಹೆಸರಿಡುವುದು ಸೂಕ್ತವಾಗಿದ್ದು ಈ ಬಾರಿಯ ದಸರಾ ಹಬ್ಬದ ಮುನ್ನ ಮರು ನಾಮಕರಣ ಮಾಡಬೇಕು ಎಂದು ಬಿರುವೆರ್ ಕುಡ್ಲ ನಿಯೋಗ ಮನವಿ ಸಲ್ಲಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವೇದವ್ಯಾಸ ಕಾಮತ್ ಫೆರಿ ರೋಡ್ ಹೆಸರು ಇದೀಗ ಕುದ್ರೋಳಿ ರಸ್ತೆಗಿದ್ದು ಇದನ್ನು ಗೋಕರ್ಣನಾಥೇಶ್ವರ ರಸ್ತೆ ಎಂದು ನಾಮಕರಣ ಮಾಡಲು ಬಿಜೆಪಿ ಸಿದ್ದವಿದೆ. ಇದಕ್ಕೆ ಪಾಲಿಕೆ ಕೌನ್ಸಿಲ್ನಲ್ಲಿ ಬಿಜೆಪಿ ಸದಸ್ಯರು,ಶಾಸಕರು, ಸಂಸದರು ಬೆಂಬಲ ನೀಡಲು ಸಿದ್ದ, ಕಾಂಗ್ರೆಸ್ ಈ ಬಗ್ಗೆ ಮುಂದಾದಲ್ಲಿ ನಮ್ಮ ಬೆಂಬಲವೂ ಇದೆ ಎಂದರು. ಇದೇ ವೇಳೆ ಹೆಸರು ನಾಮಕರಣ ಕುರಿತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಮನವಿ ನೀಡಿದ್ದೇನೆ. ಈ ಮೂಲಕ ತಾನು ನೀಡಿದ ಭರವಸೆ ಈಡೇರಿಸಲು ಬದ್ದ. ಸರಕಾರ ನಮ್ಮದಲ್ಲದ ಕಾರಣ ಹೆಚ್ಚಿನ ಸಮಯವಕಾಶ ಅಗತ್ಯವಿದೆ ಎಂದರು.
ಸಂಘಟನೆಯ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್ ಬಾಗ್, ವಸಂತ ಪೂಜಾರಿ ಪಡೀಲ್, ಬಿರುವೆರ್ ಕುಡ್ಲ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಕೇಶ್, ರಾಕೇಶ್ ಕುಮಾರ್,ಕಿಶೋರ್ ಬಾಬು,ರಾಕೇಶ್ ಚಿಲಿಂಬಿ,ಯಶ್ವಿನ್,ಮನೀಶ್ ಚಿಲಿಂಬಿ,ವಿಘ್ನೇಶ್ ಚಿಲಿಂಬಿ,ಭರತ್ ಬಂಗೇರ, ಪ್ರಾಣೇಶ್ ಬಂಗೇರ,ಕಿರಣ್ ಶೆಟ್ಟಿ,ಕಿರಣ್ ಕುಲಾಲ್ ಉರ್ವ, ರಿನಿತ್ ಅಶೋಕ್ನಗರ, ಮಹೇಶ್ ಅಶೋಕ್ನಗರ,ಲೋಹಿತ್ ಗಟ್ಟಿ, ಮಮತಾ ಪ್ರವೀಣ್,ವೀಣಾಪೂಜಾರಿ,ಭಾನುಮತಿ, ನಯನ ಕೋಟ್ಯಾನ್,ನಯನ ವಿಶ್ವನಾಥ್, ಜಯಲಕ್ಷ್ಮೀ ಮತ್ತಿತರರು ನಿಯೋಗದಲ್ಲಿದ್ದರು.