ಕಾಸರಗೋಡು, ಸೆ 9(MSP): ಜಿಲ್ಲೆಯಲ್ಲಿ ಇಲಿಜ್ವರಕ್ಕೆ ಓರ್ವ ಬಲಿಯಾಗಿದ್ದು , ಪ್ರಳಯದ ಬಳಿಕ ಕೇರಳದಾದ್ಯಂತ ಈಗಾಗಲೇ 40 ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡ ಇಲಿಜ್ವರ ಕಾಸರಗೋಡಿನಲ್ಲೂ ಹರಡತೊಡಗಿದೆ.
ಧರ್ಮತ್ತಡ್ಕದ ಅಬ್ದುಲ್ ಅಝೀಜ್ ( 35) ಮೃತಪಟ್ಟವರು. ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅಝೀಜ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.
ಜಿಲ್ಲೆಯಲ್ಲಿ ಇಲಿಜ್ವರಕ್ಕೆ ಮೊದಲ ಬಲಿಯಾಗುತ್ತಿದ್ದು , ಜನತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ 35 ಮಂದಿಯಲ್ಲಿ ಶಂಕಿತ ಇಲಿ ಜ್ವರ ಪತ್ತೆಯಾಗಿದ್ದು , ಈ ಪೈಕಿ 18 ಮಂದಿಯಲ್ಲಿ ಇಲಿಜ್ವರ ಪತ್ತೆಯಾಗಿದೆ. ಇವರು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.