ಕಾಸರಗೋಡು, ಸೆ08(SS): ಪ್ರಯಾಣಿಕರೊಬ್ಬರು ಬಿಟ್ಟು ಹೋದ ಚಿನ್ನ ಮತ್ತು ಹಣವಿದ್ದ ಬ್ಯಾಗನ್ನು ಹಿಂತಿರುಗಿಸಿ ಬಸ್ ನಿರ್ವಾಹಕರೊಬ್ಬರು (ಕಂಡೆಕ್ಟರ್) ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.
ಕುಂಬಳೆಯ ಉದಯ ಬೆಲೆ ಬಾಳುವ ಚಿನ್ನ ಮತ್ತು ಹಣವಿದ್ದ ಬ್ಯಾಗ್ ಹಿಂತಿರುಗಿಸಿ ಮಾನವೀಯತೆ ಮೆರೆದ ಬಸ್ ಕಂಡೆಕ್ಟರ್.
ಕುಂಬಳೆ - ಕಳತ್ತೂರು ನಡುವೆ ಸಂಚರಿಸುವ ವಿಠಲ ಶೆಟ್ಟಿ ಮಾಲಕತ್ವದ ಮಹಾಲಕ್ಷ್ಮೀ ಬಸ್ಸಿನಲ್ಲಿ ಚಿನ್ನಾಭರಣ ಹಾಗೂ ಹಣವಿದ್ದ ಪರ್ಸೊಂದು ಪತ್ತೆಯಾಗಿದ್ದು, ಅದನ್ನು ಕಂಡಕ್ಟರ್ ಉದಯ ಅವರು ಕುಂಬಳೆ ಪೊಲೀಸರಿಗೆ ಒಪ್ಪಿಸಿದ್ದರು.
ಬಂಬ್ರಾಣದ ಆಯಿಷಾ ಅವರ ಪರ್ಸ್ ಇದಾಗಿದ್ದು, ಈ ಬಗ್ಗೆ ದೂರು ನೀಡಲು ಠಾಣೆಗೆ ಬಂದಿದ್ದರು. ಆಗ ಪರ್ಸ್ನ ಮಾಹಿತಿ ಕೇಳಿ, ಕಂಡಕ್ಟರ್ ಒಪ್ಪಿಸಿದ ಪರ್ಸ್ ಈ ಮಹಿಳೆಯದ್ದೇ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡರು. ಬಳಿಕ ಉದಯ ಅವರನ್ನು ಠಾಣೆಗೆ ಕರೆಸಿದ ಪೊಲೀಸರು ಅವರ ಮೂಲಕವೇ ಮಹಿಳೆಗೆ ಪರ್ಸ್ ಮಹಿಳೆಗೆ ಕೊಡಿಸಿದ್ದಾರೆ.
ಬಸ್ ಕಂಡೆಕ್ಟರ್ ಉದಯ ಅವರ ಪ್ರಾಮಾಣಿಕತೆಯ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.