ಹೊಸದಿಲ್ಲಿ, ಸೆ07(SS): ಪ್ರತಿನಿತ್ಯ ಗಗನಕ್ಕೆ ಏರುತ್ತಿರುವ ತೈಲ ದರವನ್ನು ಖಂಡಿಸಿ ಸೆಪ್ಟೆಂಬರ್ 10ರಂದು ದೇಶ ವ್ಯಾಪಿ ಬಂದ್ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.
ಜನ ಸಾಮಾನ್ಯರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರಗಳ ಏರಿಕೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆ ಬಂದ್ ಮೂಲಕ ಪ್ರತಿಭಟಿಸಬೇಕಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ ತಿಳಿಸಿದ್ದಾರೆ.
ಮಾತ್ರವಲ್ಲ, ಕೇಂದ್ರ ಸರಕಾರ ತಕ್ಷಣವೇ ಅಬಕಾರಿ ಸುಂಕ ಇಳಿಸಬೇಕು ಹಾಗೂ ರಾಜ್ಯಗಳು ವ್ಯಾಟ್ ತಗ್ಗಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿಗೆ ಒಳಪಡಿಸಬೇಕು ಎಂದು ಆಗ್ರಹ ಮಾಡಿಕೊಂಡಿದೆ.
ದೇಶ ವ್ಯಾಪಿ ಬಂದ್ ಗೆ ಎಲ್ಲ ಪ್ರತಿಪಕ್ಷಗಳು ಹಾಗೂ ಸಾಮಾಜಿಕ ಸಂಘಟನೆಗಳು, ಎನ್ಜಿಒಗಳು ಬಂದ್ನಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಮನವಿ ಮಾಡಿದೆ.