ನವದೆಹಲಿ, ಸೆ 07(MSP): ತೆಂಗಿನೆಣ್ಣೆಯನ್ನು ಸೇವನೆ ಮಾಡುವುದು ಅತ್ಯಂತ ಕೆಟ್ಟ ವಿಚಾರ ಹಾಗೂ ತೆಂಗಿನ ಎಣ್ಣೆ `ಶುದ್ಧ ವಿಷ' ಎಂದು ಇತ್ತೀಚೆಗೆ ಜರ್ಮನಿಯಲ್ಲಿ ನಡೆದ ವಿಚಾರ ಸಂಕಿರ್ಣದಲ್ಲಿ ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಪ್ರೊಫೆಸರ್ ಕೆರಿನ್ ಮಿಶೆಲ್ಸ್ ಗೆ ಇದೀಗ ಭಾರತ ನೋಟಿಸ್ ನೀಡಿದೆ. ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ವೃತ್ತಿಯಲ್ಲಿರುವ ಕೆರಿನ್ ಮಿಶೆಲ್ಸ್ ನೀಡಿದ ಈ ಹೇಳಿಕೆಯಿಂದ ತೆಂಗಿನಎಣ್ಣೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲ್ಪಟ್ಟು, ಪರ ವಿರೋಧ ಅಭಿಪ್ರಾಯವನ್ನು ಹುಟ್ಟುಹಾಕಿತ್ತು.
ಇನ್ನು ಭಾರತದಲ್ಲಂತೂ ಅದರಲ್ಲೂ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ತೆಂಗಿನೆಣ್ಣೆ ಬಗ್ಗೆ, ಮಿಶೆಲ್ಸ್ ಯಾವ ಆಧಾರದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಅರ್ಥವಾಗುವುದಿಲ್ಲ. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥರಿಗೆ, ಭಾರತದ ತೋಟಗಾರಿಕೆ ಕಮಿಷನರ್ ಬಿ.ಎನ್.ಶ್ರೀನಿವಾಸ ಮೂರ್ತಿ ನೋಟಿಸ್ ನೀಡಿದ್ದಾರೆ.
ಕೆರಿನ್ ಮಿಶೆಲ್ಸ್ ನೀಡಿದ ಈ ಹೇಳಿಕೆ ಯುಟ್ಯೂಬ್ ನಲ್ಲಿ ವೈರಲ್ ಆಗಿದ್ದು, ತೆಂಗಿನೆಣ್ಣೆ ಉಪಯೋಗದ ಬಗ್ಗೆ ನಾನು ನಿಮ್ಮನ್ನು ಕೇವಲ ಎಚ್ಚರಿಸಬಲ್ಲೆ. 'ಈ ಎಣ್ಣೆ ನೀವು ತಿನ್ನುವ ಅತ್ಯಂತ ಕೆಟ್ಟ ಆಹಾರ' ಅವರು ವಿಡೀಯೋದಲ್ಲಿ ಉಲ್ಲೇಖಿಸಿದ್ದರು. ತೆಂಗಿಣ್ಣೆ ಎಣ್ಣೆಗೆ ಸಂಬಂಧಪಟ್ಟ ಈ ವೀಡಿಯೋ ಜರ್ಮನ್ ಭಾಷೆಯಲ್ಲಿದ್ದು ಅದಕ್ಕೆ 'ತೆಂಗಿನೆಣ್ಣೆ ಮತ್ತು ಇತರ ಪೌಷ್ಠಿಕಾಂಶ ದೋಷಗಳು' ಎಂಬ ಟೈಟಲ್ ಅದಕ್ಕೆ ನೀಡಲಾಗಿದೆ.