ನವದೆಹಲಿ, ಸೆ 6 (MSP): ಹಿಂಸಾತ್ಮಕ ಸುದ್ದಿ, ಸುಳ್ಳು ಸುದ್ದಿ, ಪ್ರಚೋದನಕಾರಿ ಬರಹ , ಭಯೋತ್ಪಾದಕ ಮಾಹಿತಿ, ಮಾನಹಾನಿಕಾರಕ ಚಿತ್ರ, ಅಶ್ಲೀಲ, ಕೋಮು ಸಂಬಂಧಿತ ಅಳಿಸಿ ಹಾಕಲು ಫೇಸ್ ಬುಕ್ ಸಂಸ್ಥೆ ಹೊರಟಿದೆ. ಪೋಸ್ಟಗಳ ಗುಣಮಟ್ಟ ನಿರ್ವಹಣೆ ಮತ್ತು ಆಕ್ಷೇಪಾರ್ಹ ಪೋಸ್ಟ್ ಗಳನ್ನು ಅಳಿಸಿ ಹಾಕಲು ಹೊಸದಾಗಿ ಹತ್ತು ಸಾವಿರ ನೌಕರರ ನೇಮಕಕ್ಕೆ ಮುಂದಾಗಿದೆ. ವಿಶ್ವದ 50 ಭಾಷೆಗಳಲ್ಲಿ ಕಂಟೆಂಟ್ ಮಾನಿಟರ್ ನೇಮಕ ನಡೆಯಲಿದ್ದು ಜೆನ್ ಪ್ಯಾಕ್ಟ್ ಸಂಸ್ಥೆ ಹೊಣೆ ಹೊತ್ತಿದೆ. ಕನ್ನಡದ ಪೋಸ್ಟ್ ಗಳ ಪರಿಶೀಲನೆಗಾಗಿಯೇ ಫೇಸ್ ಬುಕ್ ನಲ್ಲಿ 30 ಹುದ್ದೆಗಳಿದ್ದು ಆದರೆ ಈಗಾಗಲೇ 3000 ಅರ್ಜಿ ಬಂದಿದೆ. ಇವರಿಗೆ ವರ್ಷಕ್ಕೆ 2.25 ರಿಂದ 4 ಲಕ್ಷ ರೂ ವೇತನ ನಿಗದಿಪಡಿಸಲಾಗಿದ್ದು ಇದಲ್ಲದೆ ತಿಂಗಳ ಪ್ರೋತ್ಸಾಹ ಧನವನ್ನು ಒಳಗೊಂಡಿದೆ.
ಫೇಸ್ಬುಕ್ ನಲ್ಲಿ ನೂರಾರು ಕೋಟಿ ಪೋಸ್ಟ್ ಗಳು ನೂರಾರು ಭಾಷೆಯಲ್ಲಿ ಪ್ರಕಟವಾಗುತ್ತಿದ್ದು ಇದರ ಗುಣಮಟ್ಟ ಹಾಗೂ ಪೋಸ್ಟ್ ಗಳನ್ನು ಪರೀಕ್ಷಿಸುವುದು ಕಂಪನಿಗೆ ಸವಾಲಾಗಿದೆ ಹಾಗೆಂದು ಸುಮ್ಮನಿರುವ ಸ್ಥಿತಿಯಲ್ಲೀ ಫೇಸ್ ಬುಕ್ ಇಲ್ಲ.ಕಾರಣ ಅಂತಾರಾಷ್ಟ್ರೀಯವಾಗಿ ಎಲ್ಲಾ ಕಡೆಯಿಂದಲೂ ಫೇಸ್ಬುಕ್ ಸಂಸ್ಥೆ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ನಕಲಿ ಸುದ್ದಿ, ಅತ್ಮಹತ್ಯೆಯ ನೇರ ಪ್ರಸಾರ, ಕೊಲೆ-ಸುಲಿಗೆಯ ವಿಡೀಯೊ ಪ್ರಸಾರ ಮಾಡುವುದಕ್ಕೆ ಮಾನವ ಹಕ್ಕುಗಳ ಆಯೋಗ ತರಾಟೆಗೆ ತೆಗೆದುಕೊಂಡಿದೆ. ಭಾರತದಲ್ಲೂ ಸರಕಾರ, ಸಾಮಾಜಿಕ ಜಾಲತಾಣದಲ್ಲಿ ವದಂತಿ ಸುಳ್ಳುಸುದ್ದಿ ಬಿತ್ತರಿಸುವುದಕ್ಕೆ ಸಂಬಂಧಿಸಿ ಕಂಪನಿಗಳ ಮುಖ್ಯಸ್ಥರ ವಿರುದ್ದ ಕ್ರಿಮಿನಲ್ ವಿಚಾರಣೆಗೆ ಅವಕಾಶ ಕಲ್ಪಿಸಲು ಮುಂದಾಗಿದೆ. ಹೀಗಾಗಿ ಭಾರದಲ್ಲಿ ಫೇಸ್ ಬುಕ್ ವಾಟ್ಸ್ ಆಪ್ ಘಟಕದ ಮುಖ್ಯಸ್ಥರ ಹುದ್ದೆ ಖಾಲಿ ಇದ್ದರೂ ಕೂಡಾ ಆಕಾಂಕ್ಷಿಗಳು ಹಿಂದೇಟು ಹಾಕುವಂತಾಗಿದೆ.
ಫೇಸ್ ಬುಕ್ 2018 ರ ಜನವರಿ ಮಾರ್ಚ್ ಅವಧಿಯಲ್ಲಿ ಭಯೋತ್ಪಾದಕ ಸಂಘಟನೆ ಐಸಿಸ್ ಮತ್ತು ಅಲ್ ಖೈದಾ ಸಂಘಟನೆಗೆ ಸಂಬಂಧಿಸಿದ ಸುಮಾರು 19 ಲಕ್ಷಕ್ಕೂ ಅಧಿಕ ಮಾಹಿತಿ ತುಣುಕುಗಳನ್ನು ಅಳಿಸಿ ಹಾಕಿತ್ತು. ಇದಲ್ಲದೆ ಫೇಸ್ ಬುಕ್ 104 ಅಧಿಕ ಪೋಸ್ಟ್ ಗಳ ವಿರುದ್ದ ಕ್ರಮ ತೆಗೆದುಕೊಂಡಿದ್ದು ಹೆಚ್ಚಿನವುಗಳನ್ನು ಡಿಲೀಟ್ ಮಾಡಿದೆ. ಇದರಲ್ಲಿ ಸುಮಾರು ೫೮ ಕೋಟಿ ನಕಲಿ ಖಾತೆಗಳು ಇದೆ ಅಂಖ್ಯಾತ ಸ್ಪಾಮ್, ಅಶ್ಲೀಲ , ಲೈಂಗಿಕತೆ, ಹಿಂಸಾತ್ಮಕ ಹಾಗೂ ಭಯೋತ್ಪಾದನೆಗೆ ಪ್ರೇರೇಪಿಸುವ ಪೋಸ್ಟ್ ಗಳನ್ನು ಅಳಿಸಿ ಹಾಕಿದೆ.