ಕಾಸರಗೋಡು, ಸೆ 5(SM): ಶಾರ್ಜಾದಲ್ಲಿ ಉಂಟಾದ ಅಪಘಾತವೊಂದರಲ್ಲಿ ಕಾಞ೦ಗಾಡ್ ನಿವಾಸಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಸೌತ್ ಚಿತ್ತಾರಿಯ ಮಹಮ್ಮದ್ ಕುಂಞಿ ಮೃತಪಟ್ಟವರು. ಇವರು ಶಾರ್ಜಾದಲ್ಲಿ ಸ್ವಂತ ಮಳಿಗೆ ನಡೆಸುತ್ತಿದ್ದರು.
ಆಗಸ್ಟ್ 30ರ ಗುರುವಾರದಂದು ಸೈಕಲ್ ನಲ್ಲಿ ತೆರಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಶಾರ್ಜಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಮ್ಮದ್ ಕುಂಞಿ ಸೆಪ್ಟೆಂಬರ್ 4ರ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಇವರ ಮೃತದೇಹವನ್ನು ಊರಿಗೆ ತರುವ ಸಿದ್ಧತೆ ನಡೆಯುತ್ತಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.