ಬೆಳ್ತಂಗಡಿ, ಸೆ 4 (MSP): ಅಳದಂಗಡಿ-ಸೂಳಬೆಟ್ಟು ಊರುಗಳನ್ನು ಸಂಪರ್ಕಿಸುವ ನಡಾಯಿತೋಡು ಸೇತುವೆಯಲ್ಲಿ ಹೊಂಡವೊಂದು, ನಿರ್ಮಾಣವಾಗಿದೆಯಲ್ಲದೆ ಬದಿಯ ಮಣ್ಣು ಕುಸಿಯತೊಡಗಿದ್ದು ವಾಹನ ಚಾಲಕರಿಗೆ ಆತಂಕವನ್ನು ತಂದೊಡ್ಡಿದೆ.
ಈ ಸೇತುವೆಯಲ್ಲಿ ಹೀಗಾಗುತ್ತಿರುವುದು ಇದು ಎರಡನೆಯ ಬಾರಿ ಸುಮಾರು ಮೂರು ತಿಂಗಳ ಹಿಂದೆದೊಡ್ಡಗಾತ್ರದ ಹೊಂಡವೊಂದು ನಿರ್ಮಾಣವಾಗಿತ್ತು. ಇದರ ಬಗೆ ಮಾಧ್ಯಮಗಳಲ್ಲಿ ಬಂದ ಮೇಲೆ ಅದನ್ನು ಮುಚ್ಚಲಾಗಿತ್ತು. ಆದರೆ ಇದೀಗ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯ ಪರಿಣಾಮ ಮತ್ತೆ ಇನ್ನೊಂದು ಹೊಂಡ ನಿರ್ಮಾಣ ಹಾಗೂ ಸೇತುವೆಯ ಇನ್ನೊಂದು ಭಾಗದಲ್ಲಿನ ಬದಿಯ ಮಣ್ಣು ಕುಸಿಯತೊಡಗಿದೆ.ಇದು ಅಪಾಯಕಾರಿ ಸ್ಥಿತಿಯಲ್ಲಿದ್ದು ಬೃಹತ್ ವಾಹನಗಳು ಗೊತ್ತಿಲ್ಲದೆ ಸೇತುವೆಯ ಬದಿಯಲ್ಲಿ ಹೋದರೆ ವಾಹನ ಹಾಗೂ ಸೇತುವೆ ಕುಸಿಯುವುದು ಖಂಡಿತ.
ಇದು ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯ ಪ್ರಧಾನಮಂತ್ರಿಗ್ರಾಮ ಸಡಕ್ ಆಗಿದ್ದು, ಸೂಳಬೆಟ್ಟು ಮಾತ್ರವಲ್ಲದೆ ಫಂಡಿಜೆ, ವೇಣೂರುಗಳನ್ನೂ ಸಂಪರ್ಕಿಸುತ್ತದೆ. ಅಳದಂಗಡಿಯ ಸುತ್ತಮುತ್ತಲಿನವರಿಗೆ ಮೂಡುಬಿದರೆಗೆ ಹೋಗಲು ಇದು ಹತ್ತಿರದ ದಾರಿಯಾಗಿದೆ. ಪ್ರತಿದಿನ ನೂರಾರು ಬಾರಿ ರಿಕ್ಷಾಗಳು, ದ್ವಿಚಕ್ರವಾಹನಗಳು ಸಂಚರಿಸುತ್ತವೆ. ಘನವಾಹನಗಳ ಸಂಚಾರ ಹೆಚ್ಚಾದ ಹಾಗೆ ಅಪಾಯವೂ ಅಧಿಕವಾಗಲಿದೆ. ಕೆಲ ದಿನಗಳ ಹಿಂದೆ ನಡೆದ ಅಳದಂಗಡಿ ಗ್ರಾ.ಪಂ. ಸಭೆಯಲ್ಲಿ ಹೊಂಡದ ವಿಚಾರ ಪ್ರಸ್ತಾಪವಾಗಿತ್ತು. ಶೀಘ್ರವೇ ಇದರ ಬಗ್ಗೆ ಸಂಬಂಧಪಟ್ಟವರಿಗೆ ಲಿಖಿತವಾಗಿ ತಿಳಿಸುವುದಾಗಿ ಹೇಳಲಾಗಿತ್ತು. ಆದರೆ ದಿನಗಳು ಉರುಳಿದವೆಯೇ ವಿನಾ ದುರಸ್ತಿ ಆಗಿಲ್ಲ. ಸಂಬಂಧಪಟ್ಟವರು ತೀವ್ರ ನಿರ್ಲಕ್ಷ ಮನೋಭಾವ ತಾಳಿದ್ದಾರೆ ಎಂದು ಗ್ರಾಮಸ್ಥರ ಅಳಲು ತೋಡಿಕೊಳ್ಳುತ್ತಿದ್ದಾರೆ.
ನಾಲ್ಕೈದು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಇದ್ದಾಗಿದ್ದು, ಸೇತುವೆಗೆಧಕ್ಕೆಯಾದರೆ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಕೃಷಿಕರಿಗೆ ಹೀಗೆ ನೂರಾರು ಮಂದಿಗೆ ತೊಂದರೆಯಾಗಲಿದೆ. ಹೀಗಾಗಿ ಆದಷ್ಟು ಶೀಘ್ರ ದುರುಸ್ತಿ ಆಗಬೇಕಾಗಿದೆ- ರಿಕ್ಷಾ ಚಾಲಕ ಹರ್ಷೇಂದ್ರ
ಗ್ರಾ.ಪಂ.ಮೂಲಕ ಲೋಕೋಪಯೋಗಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಬಳಿಕ ಸಂಬಂಧಪಟ್ಟ ಅಭಿಯಂತರುಗಳು, ಶಾಸಕರು ಸೇತುವೆ ನೋಡಿ ಹೋಗಿದ್ದಾರೆ. ನಂತರದ ಬೆಳವಣಿಗೆಯ ಬಗ್ಗೆ ಮಾಹಿತಿ ಇಲ್ಲವಾಗಿದೆ - ಪಂ. ಅಭಿವೃದ್ದಿಅಧಿಕಾರಿಇಮ್ತಿಯಾಜ್