ಉಳ್ಳಾಲ, ಸೆ 3 (MSP): ಉಳ್ಳಾಲ ನಗರಸಭೆಗೆ ನಡೆದ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಕೇವಲ ಅದೃಷ್ಟದ ಮುಖಾಂತರವೇ ಗೆದ್ದಿದ್ದಾರೆ. ಹೌದು, ಉಳ್ಳಾಲ ನಗರಸಭೆ ಚುನಾವಣೆಗೆ ಕೆರೆಬೈಲು ವಾರ್ಡ್ ನಂ 16ರಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ರಾಜೇಶ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ರೈ ಸಮನಾಗಿ ತಲಾ 370 ಮತಗಳನ್ನು ಗಳಿಸಿದರು.
ಸಮ ಮತ ಬಂದ ಕಾರಣ ಮತಎಣಿಕೆ ಕಾರ್ಯದ ಮುಖ್ಯಾಧಿಕಾರಿ ಚೀಟಿ ಮೂಲಕ ವಿಜೇತರನ್ನು ಆಯ್ಕೆ ಮಾಡಲು ಚೀಟಿ ಹಾಕಿದರು. ಇದರಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಅವರ ಅದೃಷ್ಟ ಚೆನ್ನಾಗಿದ್ದು ಅವರು ಚೀಟಿ ಪ್ರಕ್ರಿಯೆಯಲ್ಲಿ ಆಯ್ಕೆಯಾದರು.. ಇವರ ಗೆಲುವಿನೊಂದಿಗೆ ಬಿಜೆಪಿ ಒಟ್ಟು ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದಂತಾಯಿತು.