ಬೆಳಗಾವಿ, ಸೆ 3 (MSP):ಬೆಳಗಾವಿಯ ಖಾನಾಪುರ ಪಟ್ಟಣ ಪಂಚಾಯಿತಿ ಇತಿಹಾಸದಲ್ಲೇ ನೂತನ ದಾಖಲೆ ಬರೆದಿದೆ. ಇಲ್ಲಿ . ತಂದೆ- ಮಗ ಹಾಗೂ ಪತಿ - ಪತ್ನಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಜತೆಯಾಗಿ ಪಟ್ಟಣ ಪಂಚಾಯಿತಿ ಮೆಟ್ಟಿಲೇರಲಿದ್ದಾರೆ.
ಖಾನಾಪುರ ಪಟ್ಟಣ ಪಂಚಾಯಿತಿಯ 12ನೇ ವಾರ್ಡ್ಗೆ ಸ್ಪರ್ಧಿಸಿದ್ದ ತಂದೆ ರಫೀಕ್ ಖಾನಾಪುರಿ ಗೆಲುವು ದಾಖಲಿಸಿದರೆ, 17ನೇ ವಾರ್ಡ್ನಿಂದ ಸ್ಪರ್ಧಿಸಿದ್ದ ಇವರ ಪುತ್ರ ಮಝರ್ ಖಾನಾಪುರಿ ಕೂಡಾ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿಯೇ ಗುರುತಿಸಿಕೊಂಡಿದ್ದ ಖಾನಾಪುರಿ ಕುಟುಂಬ ಪಟ್ಟಣ ಪಂಚಾಯಿತಿಯಲ್ಲಿ ಮಾತ್ರ ಪಕ್ಷೇತರರಾಗಿ ಸ್ಪರ್ಧಿಸಿ ಜಯ ಗಳಿಸಿದ್ದಾರೆ.ಕೆಪಿಸಿಸಿ ಸದಸ್ಯರಾಗಿದ್ದ ರಫೀಕ್ ಖಾನಾಪುರಿ ತಂದೆ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದರು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ರಫೀಕ್ ಬದಲು ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡಿದ್ದರು. ಇದರಿಂದ ಅಸಮಾಧಾನಗೊಂಡ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರ್ತಾಜೀನಾಮೆ ಸಲ್ಲಿಸಿದ್ದರು. ರಫೀಕ್ ಮೂರನೇ ಬಾರಿಗೆ ಖಾನಪುರ ಪಟ್ಟಣ ಪಂಚಾಯಿತಿ ಸದಸ್ಯರಾಗುತ್ತಿದ್ದು, ಇವರ ಪುತ್ರ ಮಝರ್ ಖಾನಾಪುರಿ ಇದೇ ಮೊದಲ ಬಾರಿಗೆ ಸದಸ್ಯರಾಗುತ್ತಿದ್ದಾರೆ.