ಬಂಟ್ವಾಳ, ಸೆ 1(SM): ಕಲ್ಲಡ್ಕದಲ್ಲಿ ಎಂಟು ತಿಂಗಳ ಹಿಂದೆ ನಡೆದ ಚೂರಿ ಇರಿತ ಪ್ರಕರಣದ ಅರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲಿಸರು ಬಂಧಿಸಿದ್ದಾರೆ. ಫಾರೂಕ್ ಯಾನೆ ಚೆನ್ನ ಫಾರೂಕ್ ಬಂಧಿತ ಆರೋಪಿ.
ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ವೀರಕಂಭ ನಿವಾಸಿ ಕೇಶವ ಎಂಬಾತನಿಗೆ ಕಲ್ಲಡ್ಕದಲ್ಲಿ ಎಂಟು ತಿಂಗಳ ಹಿಂದೆ ಚೂರಿ ಇರಿತ ಮಾಡಿದ ಆರೋಪಿ ಫಾರೂಕ್ ಯಾನೆ ಚೆನ್ನ ಫಾರೂಕ್ ಪೋಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಈತನನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಮತ್ತು ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ್ , ಅಪರಾದ ವಿಭಾಗದ ಎಸ್.ಐ. ಹರೀಶ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ನೇತೃತ್ವದ ತಂಡ ಕಲ್ಲಡ್ಕದ ಲ್ಲಿ ತೌಪೀಕ್ ಎಂಬಾತನ ಮನೆಯಿಂದ ಬಂಧಿಸಲಾಗಿದೆ. ಆರೋಪಿ ಫಾರೂಕ್ ಗೆ ಆಶ್ರಯ ನೀಡಿದ ಕಲ್ಲಡ್ಕ ನಿವಾಸಿ ತೌಪೀಕ್ ಎಂಬವನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಫಾರೂಕ್ ವಿರುದ್ದ ಈ ಹಿಂದೆ ಕಲ್ಲಡ್ಕದಲ್ಲಿ ನಡೆದ ಕೋಮು ಗಲಭೆಯ ಆರೋಪದ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.