ಮಂಗಳೂರು, ಮಾ.22 (DaijiworldNews/PY): ಜಿಲ್ಲಾಡಳಿತ ಹಾಗೂ ಮಂಗಳೂರು ಪೊಲೀಸರು ನಗರದಲ್ಲಿ ದಿಢೀರನೇ ಮಾಸ್ಕ್ ಡ್ರೈವ್ ನಡೆಸಿದ್ದಾರೆ.
ಪೆಟ್ರೋಲ್ ಬಂಕ್ ಸೇರಿದಂತೆ ಮಾಲ್ಗಳು, ಜ್ಯುವೆಲ್ಲರಿ ಶಾಪ್, ಖಾಸಗಿ ಬಸ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಡ್ರೈವ್ ನಡೆಸಿದ್ದು, ಮಾಸ್ಕ್ ಹಾಕುವಂತೆ ಹೇಳಿದರೂ ಕೇಳದ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಡಿಸಿಪಿ ಹರಿರಾಂ ಶಂಕರ್ ಅವರ ನೇತೃತ್ವದಲ್ಲಿ ಡ್ರೈವ್ ನಡೆಸಿದ್ದು, ಮಾಸ್ಕ್ ಹಾಕದವರನ್ನು ಡಿ.ಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ನಿಯಮ ಉಲ್ಲಂಘಿಸಿದ ಬಸ್ಗಳನ್ನು ಸೀಜ್ ಮಾಡಿದ್ದು, ಸಿಟಿ ಸೆಂಟರ್ ಮಾಲ್ನ ಮೂರು ಶಾಪ್ಗಳನ್ನು ಬಂದ್ ಮಾಡಲು ಆದೇಶಿಸಿದ್ದಾರೆ.