ಹೊಸದಿಲ್ಲಿ, ಆ 30(SM): ರಾಹುಲ್ ಗಾಂಧಿಗೆ ಅದ್ಯಾಕೋ ಪ್ರಧಾನಿ ನರೇಂದ್ರ ಮೋದಿ ಕಂಡ್ರೆ ಏನಾದ್ರು ಕಮೆಂಟ್ ಮಾಡ್ಬೇಕು ಅನ್ಸುತ್ತದೆ. ಪ್ರಧಾನಿಗಳ ವಿರುದ್ಧ ಒಂದಲ್ಲ ಒಂದು ಆರೋಪಗಳನ್ನು ಮಾಡುತ್ತಿದ್ದ ರಾಹುಲ್ ಗಾಂಧಿ ಇದೀಗ ಹೊಸ ಆರೋಪವೊಂದನ್ನು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಭ್ರಷ್ಟ ಶ್ರೀಮಂತ ಗೆಳೆಯರಿಗೆ ಸಹಾಯ ಮಾಡಲೆಂದು ನೋಟು ಅಮಾನ್ಯೀಕರಣ ಮಾಡಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಪ್ಪುಹಣದ ವಿರುದ್ಧ ಹೋರಾಡಲು ನೋಟು ರದ್ಧತಿ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ ಆರ್ಬಿಐ ಪ್ರಕಾರ ಬಹುತೇಕ ಎಲ್ಲಾ ನೋಟುಗಳು ಆರ್ಬಿಐಗೆ ವಾಪಸ್ ಬಂದಿವೆ. ಹಾಗಿದ್ದರೆ ಕಪ್ಪುಹಣ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದ್ದಾರೆ. ಆರ್ಬಿಐ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ ವರದಿಯಲ್ಲಿ 99.60% ನೋಟುಗಳು ವಾಪಸ್ ಬಂದಿದ್ದಾಗಿ ವರದಿ ನೀಡಿದೆ. ಅಮಿತ್ ಶಾ ಬ್ಯಾಂಕಿನಲ್ಲಿ 700 ಕೋಟಿ ಬದಲು ನೋಟು ರದ್ಧತಿ ಭಾರತದ ಅತಿದೊಡ್ಡ ಹಗರಣ ಎಂದ ರಾಹುಲ್, ಮೋದಿ ಅವರ ಕೆಲವು ಶ್ರೀಮಂತ ಸ್ನೇಹಿತರ ಕಪ್ಪು ಹಣವನ್ನು ಬಿಳಿ ಮಾಡಲು ನೋಟು ರದ್ಧತಿ ಮಾಡಲಾಗಿತ್ತು. ನೋಟು ಅಮಾನ್ಯೀಕರಣ ದೇಶದ ಅತಿ ದೊಡ್ಡ ಹಗರಣ ಎಂದರು.