ಕುಂದಾಪುರ, ಆ 30 (MSP) : ಮನೆಗೆ ಬಂದು , ಜಮೀನಿನಲ್ಲಿ ಮೊಬೈಲ್ ಟವರ್ ಹಾಕಿಸಿಕೊಡುವುದಾಗಿ ಹೇಳಿ ನಂಬಿಸಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಏಳು ಸಾವಿರ ರೂಪಾಯಿ ಹಾಗೂ ಮೊಬೈಲನ್ನು ಎಗರಿಸಿ ಪರಾರಿಯಾದ ಆರೋಪಿಯನ್ನು ಕುಂದಾಪುರ ಪೊಲೀಸರು ಬೆಳಗಾಂನಲ್ಲಿ ಬಂಧಿಸಿದ್ದಾರೆ. ಬಂಧಿತ
ಆರೋಪಿಯನ್ನು ಬೆಳಗಾಂ ಜಿಲ್ಲೆಯ ನಿಪ್ಪಾಣಿ ರಸ್ತೆ ನಿವಾಸಿ ಇಸುಬು ಅಮೀರ್ ಪಾಟಾನ್ ಎಂಬಾತನ ಮಗ ಇಲಿಯಾಸ್ ಪಾಟಾನ್(53) ಎಂದು ಗುರುತಿಸಲಾಗಿದೆ.
ಕುಂದಾಪುರದ ಜಿ ಹಸೈನಾರ್ ಎಂಬುವರ ಮನೆಗೆ ಕಾರಿನಲ್ಲಿ ಜುಲೈ 27ರಂದು ಆಲ್ಟೋ ಕಾರಿನಲ್ಲಿ ಹೋಗಿ, ಅವರ ಜಮೀನಿನಲ್ಲಿ ರಿಲಯನ್ಸ್ ಕಂಪೆನಿಯ ಮೊಬೈಲ್ ಟವರ್ ಹಾಕಿಸಿಕೊಡುವುದಾಗಿಯೂ ಇದರಿಂದ ಪ್ರತೀ ತಿಂಗಳು 15 ಸಾವಿರ ರೂಪಾಯಿ ಬಾಡಿಗೆ ಬರುತ್ತದೆ ಎಂದು ನಂಬಿಸಿದ್ದ. ಅಲ್ಲದೇ ಇದಕ್ಕಾಗಿ ಕುಮದಾಪುರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಲಿದೆ ಎಂದು ನಂಬಿಸಿ ಅಲ್ಲಿಗೆ ಕರೆದೊಯ್ದು ಅಲ್ಲಿ ನೋಂದಣಿ ಖರ್ಚು ಎಂದು ಹೇಳಿ 7 ಸಾವಿರ ರೂಪಾಯಿ ವಸೂಲಿ ಮಾಡಿಕೊಂಡಿದ್ದ. ಜೊತೆಗೆ ನೋಂದಣಿಗೆ ಆಧಾರ್ ಕಾರ್ಡ್ ಬೇಕು ಎಂದಾಗ ಮೊಬೈಲ್ನಲ್ಲಿರುವುದಾಗಿ ಹಸೈನಾರ್ ತಿಳಿಸಿದ್ದರು. ಆಗ ಆರೋಪಿ ಹಸೈನಾರ್ ಅವರ ಮೊಬೈಲ್ ಪಡೆದು ಪರಾರಿಯಾಗಿದ್ದ. ಈ ಬಗ್ಗೆ ಕುಂದಾಪುರ ಪೊಲಿಸರು ಆಲ್ಟೋ ಕಾರ್ ಹಾಗೂ ಹಸೈನಾರ್ ಅವರ ಮೊಬೈಲ್ ಲೊಕೇಶನ್ ಆಧರಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.