ಕಾರ್ಕಳ, ಆ 30 (MSP) : ಈದು ಗ್ರಾಮದ ಪಾದೆಮನೆ ಮತ್ತು ರಾಧಿಕಾ ಬಾರ್ ಬಳಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಮಂಜೂರಾದ 2 ಸೋಲಾರ್ ದೀಪಗಳಿಗೆ ಅಳವಡಿಸಿದ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾಯನಕೆರೆಯ ತೆಂಕಕಾರಂದೂರುನ ನವಾಜ್(೨೫) ಎಂಬಾತನನ್ನು ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೇನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ.
ಆಗಸ್ಟ್ 29ರಂದು ಬೆಳಿಗ್ಗೆ 6ರ ವೇಳೆಗೆ ಈದು ಗ್ರಾಮದ ಹೊಸ್ಮಾರು ಜಂಕ್ಷನ್ ಬಳಿ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸರು ಕೆಎ19 ಎಂಸಿ 4110 ನೇ ನಂಬ್ರದ ಕಾರನ್ನು ತಪಾಸಣೆಯ ನಿಟ್ಟಿನಲ್ಲಿ ತಡೆದು ನಿಲ್ಲಿಸಿದ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಅದರಲ್ಲಿ 3 ಬ್ಯಾಟರಿಗಳು ಪತ್ತೆಯಾಗಿದೆ.
ಅಜೆಕಾರು, ಹೆಬ್ರಿ, ಕಾರ್ಕಳ ನಗರ ಠಾಣೆಗಳಲ್ಲಿ ಕಳವು ಮಾಡಿದ ೫ ಬ್ಯಾಟರಿಗಳನ್ನು ಗುರುವಾಯನಕೆರೆ ಯೂಸಫ್ ಎಂಬವರ ಗುಜುರಿ ಅಂಗಡಿಗೆ ಮಾರಾಟ ಮಾಡಿದ್ದು ಒಟ್ಟು 8 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಒಟ್ಟು ಮೌಲ್ಯ 40 ಸಾವಿರ ಎಂದು ಅಂದಾಜಿಸಲಾಗಿದೆ. ಆರೋಪಿಯಿಂದ ವಶಪಡಿಸಿಕೊಂಡ ಕಾರಿನ ಮೌಲ್ಯ 3,40,000 ಆಗಿದೆ.
ಕಳವು ಪ್ರಕರಣದಲ್ಲಿ ಗುರುವಾಯನಕೆರೆ ನಿವಾಸಿಗಳಾದ ಅಜಯ್ ಹಾಗೂ ನಜೀರ್ ಭಾಗಿಯಾಗಿದ್ದಾರೆ. ಬಂಧಿತ ಆರೋಪಿ ನವಾಜ್ ನಿವಾಸಿಯಾಗಿದ್ದಾನೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.