ನವದೆಹಲಿ , ಆ 29 (MSP) : ಭಾರತದ ರೂಪಾಯಿ ಮೌಲ್ಯವೂ ಅಮೇರಿಕಾ ಡಾಲರ್ ಮುಂದೆ ಕುಸಿತ ಕಂಡಿದೆ. ಡಾಲರ್ ಎದುರು 42 ಪೈಸೆ ಕುಸಿತ ಕಂಡಿರುವ ರೂಪಾಯಿ ಕನಿಷ್ಠ 70.52ಕ್ಕೆ ಕುಸಿದಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ.
ಇನ್ನು ಭಾರತದ ರೂಪಾಯಿ ಮೌಲ್ಯವೂ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಧಿರಾಮ್ ಮುಂದೆ ಕುಸಿತ ಕಂಡಿದ್ದು ರೂಪಾಯಿ ಮೌಲ್ಯವೂ 19.20 ಗೆ ಇಳಿದಿದೆ. ಒಂದು ಮಾಹಿತಿಯಂತೆ ಅಮೇರಿಕಾ ಡಾಲರ್ ಕರೆನ್ಸಿಗಾಗಿ ಅತಿಯಾದ ಬೇಡಿಕೆ ಮತ್ತು ವಿದೇಶಿ ನಿಧಿಯ ಹೊರಹರಿವಿನ ಹೆಚ್ಚಳವೂ ಡಾಲರ್ ಮೌಲ್ಯ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದೆಡೆ ಕಚ್ಚಾ ತೈಲ ಬೆಲೆ ಏರಿಕೆಯಾದ ನಂತರ ತೈಲ ಸಂಸ್ಕರಣಾಗಾರಗಳು ಹಾಗೂ ಅಮದುದಾರರು ಅಮೆರಿಕ ಕರೆನ್ಸಿಗೆ ಡಿಮ್ಯಾಂಡ್ ಮಾಡಿರುವುದು ಭಾರತದ ರೂಪಾಯಿ ಮೌಲ್ಯಕ್ಕೆ ನೇರ ಹೊಡೆತ ನೀಡಿದೆ.