ಕಾಸರಗೋಡು,ಆ 28 (MSP) : ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗೆ ಮಲಯಾಳ ಶಿಕ್ಷಕ ನೇಮಕ ವಿರುದ್ಧ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಲಾಗಿದೆ. ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನ ಗಣಿತ ಪಾಠಕ್ಕೆ ಕನ್ನಡದ ಬದಲು ಮಲಯಾಳ ಶಿಕ್ಷಕನ ನೇಮಕ ವಿರುದ್ಧ ನಾಳೆಯಿಂದ (ಆ.29) ಹೋರಾಟ ತೀವ್ರಗೊಳಿಸಲು ಶಾಲಾ ರಕ್ಷಕ -ಶಿಕ್ಷಕ ಸಂಘ ಮತ್ತು ಕನ್ನಡಾಭಿಮಾನಿಗಳು ತೀರ್ಮಾನಿಸಿದ್ದು , ಕನ್ನಡ ಹೋರಾಟ ಸಮಿತಿ ತೀರ್ಮಾನಿಸಿದೆ.
ಓಣಂ ರಜೆ ಕಳೆದು ನಾಳೆ ಯಿಂದ ಶಾಲೆಗಳು ಪುನರಾರಂಭಗೊಳ್ಳುತ್ತಿದೆ. ರಜೆ ಆರಂಭಗೊಳ್ಳುವ ದಿನಗಳ ಹಿಂದೆ ಐದು ದಿನಗಳ ರಜೆ ಪಡೆದು ಊರಿಗೆ ತೆರಳಿದ್ದ ಮಲಯಾಳ ಶಿಕ್ಷಕ ಇದೀಗ ಓಣಂ ರಜೆ ಬಳಿಕ ಶಾಲೆಗೆ ಹಾಜರಾಗುವ ಸಾಧ್ಯತೆ ಇರುವುದರಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ. ಶಿಕ್ಷಕಕ ಶಾಲೆಗೆ ಆಗಮಿಸಿದ್ದಲ್ಲಿ ದಿಗ್ಬಂಧನ ಹಾಕಲು ತೀರ್ಮಾನಿಸಲಾಗಿದೆ. ಬೇಡಿಕೆ ಈಡೇರುವ ತನಕ ಹೋರಾಟ ತೀವ್ರಗೊಳಿಸಲು ತೀರ್ಮಾನಿಸಲಾಗಿದೆ.