ಉಡುಪಿ, ಆ 27 (MSP): ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೂಗತ ಪಾತಕಿ ಬನ್ನಂಜೆ ರಾಜನ ತಾಯಿ ವಿಲಾಸಿನಿ ಟೀಚರ್ (78) ಆ 25ರ ಶನಿವಾರ ತನ್ನ ಮನೆಯಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಮಲ್ಪೆ ಕಡಲ ಕಿನಾರೆ ಸಮೀಪದ ರುದ್ರ ಭೂಮಿಯಲ್ಲಿ ಇಂದು (ಆ.27) ನಡೆಯುವ ತಾಯಿ ವಿಲಾಸಿನಿ ಶೆಟ್ಟಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜಾನಿಗೆ ನ್ಯಾಯಾಲಯ ಅವಕಾಶ ನೀಡಿದೆ.
ಉಡುಪಿಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಟಿ. ಭಾನುವಾರ ಆದೇಶ ನೀಡಿದ್ದು ಪ್ರತಿಯನ್ನು ಉಡುಪಿ ನಗರ ಠಾಣಾಧಿಕಾರಿಗಳಿಗೆ ತಲುಪಿಸಿದ್ದಾರೆ. ಆ 25ರ ಶನಿವಾರ ಮನೆಯಲ್ಲಿ ಸುಮಾರು ಸಂಜೆ 6.30 ರ ವೇಳೆಗೆ ಬನ್ನಂಜೆ ರಾಜಾ ನ ತಾಯಿ ವಿಲಾಸಿನಿ ಶೆಟ್ಟಿಗಾರ್ ಕಲ್ಮಾಡಿ ಸಮೀಪದ ಮನೆಯಲ್ಲಿ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಕೂಡಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಮೃತದೇಹ ಸದ್ಯ ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ.
ಈ ಹಿನ್ನಲೆಯಲ್ಲಿ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬನ್ನಂಜೆ ರಾಜಾನಿಗೆ ಅವಕಾಶ ನೀಡುವಂತೆ ಹಿರಿಯ ವಕೀಲ ಎಂ ಶಾಂತರಾಮ್ ಶೆಟ್ಟಿ ಭಾನುವಾರ ನ್ಯಾಯಾಧೀಶ ವೆಂಕಟೇಶ್ ಟಿ. ನಾಯ್ಕ್ ಅವರ ಮನೆಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪರಿಶೀಲಿದ್ದ ನಾಯ್ಯಾಧೀಶರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬನ್ನಂಜೆ ರಾಜನಿಗೆ ಅವಕಾಶ ನೀಡಿದ್ದಾರೆ.
ಮೃತ ವಿಲಾಸಿನಿ ಶೆಟ್ಟಿಗಾರ್ ಅವರ ಮೂವರು ಮಕ್ಕಳಲ್ಲಿ ಕಿರಣ್ ಮೊದಲ ಪುತ್ರನಾಗಿದ್ದರೆ, ಎರಡನೆಯಾತ ಅರುಣ್ ಮೂರನೆಯಾತ ರಾಜೇಂದ್ರ ಅಲಿಯಾಸ್ ಬನ್ನಂಜೆ ರಾಜ. ಇವರ ಮೂರು ಮಕ್ಕಳಲ್ಲಿ ಮೊದನೆಯವರು ಈಗಾಗಲೇ ಮೃತಪಟ್ಟಿದ್ದಾರೆ. ಎರಡನೇ ಪುತ್ರ ಅರುಣ್ ತನ್ನ ತಾಯಿಯನ್ನು ಆರೈಕೆ ಮಾಡುತ್ತಿದ್ದರು. ತಾಯಿಯ ಮೇಲೆ ಅತೀವ ಪ್ರೀತಿಯಿದ್ದ ಬನ್ನಂಜೆ ರಾಜಾ ಕಳೆದ ತಿಂಗಳಷ್ಟೇ (ಜುಲೈ 9 ರಂದು) ಉಡುಪಿಗೆ ಭೇಟಿ ನೀಡಿ. ತಾಯಿಯೊಂದಿಗೆ ಕೆಲಗಂಟೆಗಳನ್ನು ಮನೆಯಲ್ಲಿ ಕಳೆದಿದ್ದ, ಬಳಿಕ ಮತ್ತೆ ಬೆಳಗಾವಿ ಹಿಂಡಲಗಾ ಜೈಲಿಗೆ ರಾಜಾನನ್ನು ಕಳುಹಿಸಲಾಗಿತ್ತು. ಒಂದು ಲಕ್ಷ ಭದ್ರತಾ ಠೇವಣಿ ಇರಿಸಿ ಭಾನುವಾರ ರಾತ್ರಿ ಕರೆತರಲಾಗುತ್ತಿದೆ. ಸೋಮವಾರ ವಿಲಾಸಿನಿಯವರ ಅಂತಿಮ ಸಂಸ್ಕಾರ ನಡೆಯಲಿದೆ.