ಮಂಗಳೂರು, ಆ 26(SM): ಮಂಗಳೂರು ಕ್ಯಾಥೋಲಿಕ್ ಕೋ ಆಫರೇಟಿವ್(MCC) ಬ್ಯಾಂಕ್ ಇದರ ನಿರ್ದೇಶಕ ಹಾಗೂ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಅನಿಲ್ ಲೋಬೊ ತಂಡ ಎಲ್ಲಾ 13 ಸೀಟುಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯಿತು. ನಿರ್ದೇಶಕರ ಸ್ಥಾನಕ್ಕೆ ಅನಿಲ್ ಲೋಬೊ ಮತ್ತು ಆಲ್ವಿನ್ ಪತ್ರವೋ ಪಂಗಡದ ಮಧ್ಯೆ ಚುನಾವಣೆ ನಡೆಯಿತು. ಎಂಸಿಸಿ ಬ್ಯಾಂಕ್ ನ ನಿರ್ದೇಶಕರಾಗಿ ಅನಿಲ್ ಲೋಬೊ 3,793 ಮತಗಳನ್ನು ಪಡೆದು ಪುನರಾಯ್ಕೆಗೊಂಡಿದ್ದಾರೆ. ಅವರ ಪ್ರತಿಸ್ಪರ್ಧಿ ಅಲ್ವಿನ್ ಪತ್ರಾವೊ 3,018 ಮತಗಳನ್ನು ಪಡೆದಿದ್ದಾರೆ. 25,938 ಒಟ್ಟು ಮತದಾರರ ಪೈಕಿ 6,706 ಮತಗಳು ಚಲಾವಣೆಗೊಂಡಿವೆ.
ವಿಜೇತ ತಂಡದ ಸದಸ್ಯರು ಗಳಿಸಿದ ಮತಗಳ ವಿವರ ಈ ಕೆಳಗಿನಂತಿದೆ.
ಅನಿಲ್ ಲೋಬೊ ತಂಡ:
ಅನಿಲ್ ಲೋಬೊ (3793), ಡೋಲ್ಫಿ ಜೋಸೆಫ್ ಪತ್ರಾವೊ (3389), ಮಾರ್ಸೆಲ್ ಮ್ಯಾಥ್ಯು ಡಿಸೋಜ(3344), ಆಂಡ್ರ್ಯು ಡಿಸೋಜ(3503), ಜೆರಾಲ್ಡ್ ಜೂಡ್ ಡಿಸಿಲ್ವಾ(3410), ಹೆರಾಲ್ಡ್ ಜೋನ್ ಮೊಂತೇರೊ(3191), ರೋಶನ್ ಡಿಸೋಜ(3401), ಜೋಸೆಫ್ ಅನಿಲ್ ಪತ್ರಾವೊ(3502), ಎಲ್ ರೊಯ್ ಕಿರಣ್ ಕ್ರಾಸ್ಟೊ(3390), ಜೆ.ಪಿ. ರೊಡ್ರಿಗಸ್(3426), ಡೆವಿಡ್ ಡಿಸೋಜ(3301), ಡಾ. ಫ್ರೀಡಾ ಫ್ಲಾವಿಯಾ ಡಿಸೋಜ(3669), ಐರಿನ್ ರೆಬೆಲ್ಲೊ(3973).