ಕಾರ್ಕಳ, ಆ 26(SM): ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾರ್ಕಳ ಕಾಂಗ್ರೆಸ್ ನಿಂದ ನೇಮಿರಾಜ ರೈ ಎಂಬವರನ್ನು ಉಚ್ಚಾಟನೆಗೊಳಿಸಲಾಗಿದೆ. ನೇಮಿರಾಜರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಹೈಕಮಾಂಡ್ ಆದೇಶ ನೀಡಿದೆ.
ಪಕ್ಷ ವಿರೋಧಿ ಚಟುವಟಿಕೆಗಳ ಕುರಿತಂತೆ ಈ ಹಿಂದೆ ಹಲವು ಬಾರಿ ಕಾರಣ ಕೇಳಿ ನೋಟೀಸು ನೀಡಿದರೂ, ಅದಕ್ಕೆ ಪ್ರತಿಕ್ರಿಯಿಸುತ್ತಿರಲಿಲ್ಲ. ಅಲ್ಲದೆ ನಿರಂತರ ಪಕ್ಷದ ಆದೇಶವನ್ನು ಉಲ್ಲಂಘಿಸಿ ಪಕ್ಷ, ನಾಯಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಮಾನಹಾನಿಕಾರಕ ಪತ್ರಿಕಾ ಹೇಳಿಕೆಗಳನ್ನು ನೀಡಿರುವುದನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಆ ನೆಲೆಯಲ್ಲಿ ಇವರನ್ನು ಉಚ್ಫಾಟಿಸಲಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಕಟಣೆ ತಿಳಿಸಿದೆ.