ದೆಹಲಿ, ಆ 23 (MSP): ಸುಪ್ರೀಂಕೋರ್ಟ್ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಸಹೋದ್ಯೋಗಿ ನ್ಯಾಯಮೂರ್ತಿಗಳಿಂದಲೇ ತೀವ್ರ ಟೀಕೆಗೆ ಒಳಗಾಗಿದ್ದ ಸುಪ್ರೀಂಕೋರ್ಟ್ ಮುಖ್ಯ ನಾಯ್ಯಮೂರ್ತಿ ದೀಪಕ್ ಮಿಶ್ರಾ. ಇನ್ನೆರಡು ತಿಂಗಳಲ್ಲಿ ನಿವೃತ್ತರಾಗುತ್ತಿದ್ದಾರೆ. ಇವರು ಅಕ್ಟೋಬರ್ ನಲ್ಲಿ ನಿವೃತ್ತರಾಗುತ್ತಿದ್ದು, ಈ ಹಿನ್ನಲೆಯಲ್ಲಿ ನಾಲ್ಕಕ್ಕೂ ಹೆಚ್ಚಿನ ಪ್ರಕರಣದ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ.
ಅಕ್ಟೋಬರ್ ನಲ್ಲಿ ಇವರು ನಿವೃತ್ತರಾಗಲಿದ್ದು, ಅದರೊಳಗಾಗಿ ಆಧಾರ್ , ಅಯೋಧ್ಯೆ, ಐಪಿಸಿ ಸೆಕ್ಷನ್ 377 ಹಾಗೂ ಶಬರಿಮಲೆ ಸಹಿತ ಇನ್ನಿತರ ಐತಿಹಾಸಿಕ ಪ್ರಕರಣದ ಕುರಿತು ಅವರು ಆದೇಶ ನೀಡಲಿದ್ದಾರೆ. ಈ ಎಲ್ಲಾ ಪ್ರಕರಣಗಳ ವಿಚಾರಣೆಗಳು ಈ ಹಿಂದೆಯೇ ಮುಗಿದಿದ್ದು ಇದರ ತೀರ್ಪು ಕಾಯ್ದಿರಿಸಲಾಗಿದೆ. ನಾಯ್ಯಮೂರ್ತಿ ದೀಪಕ್ ಮಿಶ್ರಾ , ನಿರ್ಭಯ ಪ್ರಕರಣದ ಅತ್ಯಾಚಾರಿಗಳಿಗೆ ಮರಣದಂಡನೆ, ಖಾಸಗಿತನವೂ ಮೂಲಭೂತ ಹಕ್ಕು, ಮುಂತಾದ ಬಹಳಷ್ಟು ಚಾರಿತ್ರಿಕ ಆದೇಶಗಳನ್ನು ಈಗಾಗಲೇ ಅವರು ನೀಡಿದ್ದಾರೆ.
ಇನ್ನು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾ.ಮಿಶ್ರಾ ನೇತೃತ್ವದ ನ್ಯಾಯಪೀಠವೂ ಶೀಘ್ರದಲ್ಲೇ ಅಂತಿಮ ಆದೇಶ ನೀಡುತ್ತದೆ ಎಂಬ ಭರವಸೆಯಿತ್ತು. ಆದರೆ ಈಗಿರುವ ಬೆಳವಣಿಗೆ ಗಮನಿಸಿದರೆ ಅದು ಸಾಧ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಆದಲ್ಲದೇ ಈ ಪ್ರಕರಣದ ಮುಖ್ಯ ಕೇಂದ್ರ ಬಿಂದು ಅಂಶವಾಗಿರುವ ಮಸೀದಿಯೂ ಇಸ್ಲಾಂನ ಅವಿಭಾಜ್ಯ ಅಂಗವೇ ? ಅಥವಾ ಅಲ್ಲವೇ ? ಎಂಬ ಕುರಿತ ವಿಚಾರವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೇ ಎಂಬ ವಿಚಾರದ ಕುರಿತು ತೀರ್ಪು ಕಾಯ್ದಿರಿಸಲಾಗಿದೆ. ಈ ಆದೇಶವು ಅಯೋಧ್ಯೆ ಪ್ರಕರಣದ ದಿಕ್ಕು ನಿರ್ಣಯಿಸಲಿದೆ.