ಬೆಳ್ತಂಗಡಿ, ಆ 21 : ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನಕ್ಕೆ ತರಲು ನಿರ್ಧರಿಸುವಂತೆ ಕಾಣಿಸುತ್ತಿದ್ದು, ಇದರ ವಿರುದ್ದ ಇರುವ ಜನಾಕ್ರೋಶವನ್ನು ರಾಜ್ಯ ಸರ್ಕಾರದತ್ತ, ತಿರುಗಿಸಲು , ರಾಜ್ಯ ಸರ್ಕಾರವೂ, ಕೇಂದ್ರ ಸರ್ಕಾರಕ್ಕೆ ವರದಿ ನೀಡಿಲ್ಲವೆಂದು ಬಿಜೆಪಿ ಆರೋಪ ಮಾಡುತ್ತಾ ಜನರನ್ನು ವಂಚಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ. ಕೆ ಹರೀಶ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.
ಹಿಂದಿನ ರಾಜ್ಯ ಸರ್ಕಾರ ಈ ವರದಿಗೆ ಮೂರು ಬಾರಿ ಆಕ್ಷೇಪಣೆ ಸಲ್ಲಿಸಿದೆ. ಈಗಲೂ ಆಕ್ಷೇಪಣೆಯನ್ನು ಸಲ್ಲಿಸಲಾಗಿದೆ. ಜನ ವಿರೋಧಿಯಾದ ವರದಿಯನ್ನು ಕೇಂದ್ರ ಸರ್ಕಾರವೇ ತಿರಸ್ಕರಿಸಲಿ ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಕರ್ ಅಜ್ರಿ, ಯೂತ್ ಅಧ್ಯಕ್ಷ ಅಭಿನಂದನ್ ಹರೀಶ್ , ಜಿ.ಪಂ ಸದಸ್ಯ ಶೇಖರ್ ಕುಕ್ಕೇಡಿ, ಮಾಜಿ ಸದಸ್ಯ ಶೈಲೇಶ್ ಕುಮಾರ್ , ತಾಪಂ ಸದಸ್ಯ ಪ್ರವೀಣ್ ಗೌಡ, ಮುಖಂಡರಾದ ಜಗದೀಶ್ ಡಿ. ಅನಿಲ್ ಪೈ ಮತ್ತಿತರರು ಉಪಸ್ಥಿತರಿದ್ದರು.