ಕಾಸರಗೋಡು, ಆ ೨೦: ಕೇರಳದಲ್ಲಿ ಒಂದು ವಾರಗಳ ಕಾಲ ಉಂಟಾದ ಪ್ರವಾಹ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಆದರೆ, ಕಾಸರಗೋಡು ಜಿಲ್ಲೆಗೆ ಲಭಿಸಿದ ಮಳೆ ಪ್ರಮಾಣ ಕಡಿಮೆ.
ಕಾಸರಗೋಡು ಜಿಲ್ಲೆಯಲ್ಲಿ ಸರಾಸರಿ ಗಿಂತ ೧೧ ಶೇಕಡಾ ಮಳೆ ಮಾತ್ರ ಈ ಬಾರಿ ಅಧಿಕ ಲಭಿಸಿದೆ. ಆದರೆ ಇಡುಕ್ಕಿ ಜಿಲ್ಲೆಯಲ್ಲಿ ಸರಾಸರಿಗಿಂತ 93 ಶೇಕಡಾ ಅಧಿಕ ಮಳೆ ಲಭಿಸಿದೆ. ತಿರುವನಂತಪುರದಲ್ಲಿ 46, ಕೊಲ್ಲಂನಲ್ಲಿ 55, ಆಲಪ್ಪುಝದಲ್ಲಿ 32, ಪತ್ತನಂತಿಟ್ಟದಲ್ಲಿ 48, ಕೋಟಯಂನಲ್ಲಿ 52, ಎರ್ನಾಕುಲಂನಲ್ಲಿ 49, ತ್ರಿಶೂರುನಲ್ಲಿ 16, ಮಲಪ್ಪುರಂನಲ್ಲಿ 52, ಪಾಲಕ್ಕಾಡ್ ನಲ್ಲಿ 74, ವಯನಾಡ್ ನಲ್ಲಿ 28, ಕಣ್ಣೂರು ಜಿಲ್ಲೆಯಲ್ಲಿ 12 ಶೇಕಡಾ ಮಳೆಯಾಗಿದೆ. ಅಂಕಿ ಅಂಶದಂತೆ ಮೇ 29 ರಿಂದ ಆಗಸ್ಟ್ 19ರ ತನಕದ ದಿನಗಳಲ್ಲಿ ಸಾಮಾನ್ಯವಾಗಿ ಲಭಿಸುವ ಮಳೆಗಿಂತ 164 ಶೇಕಡಾ ಅಧಿಕ ಮಳೆ ಈ ಬಾರಿ ಲಭಿಸಿದೆ ಎಂದು ಅಂಕಿ ಅಂಶ ತಿಳಿಸುತ್ತಿದೆ. ಮಧ್ಯ ಕೇರಳದ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ದಶಕಗಳ ಬಳಿಕ ಕೇರಳವು ಈ ಬಾರಿ ಮಳೆ ಜಲ ಪ್ರಳಯದಿಂದ ಜನರ ಬದುಕನ್ನು ಕೊಚ್ಚಿಕೊಂಡು ಹೋಗಿದೆ.