ಬೆಳ್ತಂಗಡಿ, ಆ 20: ಬೆಂಗಳೂರು- ಮಂಗಳೂರು ಪೆಟ್ರೋಲ್ಪೈಪ್ ಲೈನ್ನ ನೆರಿಯಗ್ರಾಮದ ಪಿಲಿಕಲದಲ್ಲಿರುವ ಪಂಪ್ ಹೌಸ್ನಲ್ಲಿ ಭೂ ಕುಸಿತದ ಭೀತಿಸೃಷ್ಟಿಯಾಗಿದ್ದು ಪೈಪ್ಲೈನ್ ಮೂಲಕವಾಗಿ ಪೆಟ್ರೋಲ್ ಸಾಗಾಟ ಸ್ಥಗಿತಗೊಳಿಸಲಾಗಿದೆ.
ಪಂಪ್ ಹೌಸ್ನ ಹಿಂಬಾಗದಗುಡ್ಡದ ಭೂಮಿದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದುಅಪಾಯಕಾರಿ ಸ್ಥಿತಿಯಲ್ಲಿದೆ. ಸಣ್ಣ ಪ್ರಮಾಣದಲ್ಲಿ ಕುಸಿತವಾಗಿದ್ದು ಕಂಪೌಡಿಗೆ ಹಾನಿಯಾಗಿದೆ. ಹಾಗೂ ಅಲ್ಲಿಯೇಇರುವ ಪೈಪ್ಬೆಂಡ್ ಆಗಿರುವುದಾಗಿ ತಿಳಿದು ಬಂದಿದೆ.ಈ ಹಿಂದೆ ಇದರ ಸಮೀಪವೇ 2008 ರಲ್ಲಿ ವರ್ಷಗಳ ಹಿಂದೆ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿತ್ತು. ನೆರಿಯ ಗ್ರಾಮದಲ್ಲಿ ಕೆಲ ದಿನಗಳ ಹಿಂದೆಯೂ ಭಾರೀ ಭೂಕುಸಿತವಾಗಿತ್ತು ಈ ಹಿನ್ನಲೆಯಲ್ಲಿಭೂಮಿಬಿರುಕುಕಂಡು ಬಂದಹಿನ್ನಲೆಯಲ್ಲಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅವರು ನೀಡಿರುವ ವರದಿಯ ಆಧಾರದಲ್ಲಿ ಇದೀಗ ಪೆಟ್ರೋಲ್ಹಾಗೂ ಡೀಸೆಲ್ ಸಾಗಾಟವನ್ನು ಕೂಡಲೇ ಸ್ಥಗಿತಗೊಳಿಸಲಾಗಿದೆ.ಗುಡ್ಡ ಕುಸಿದರೆ ಇಡೀ ಪಂಪ್ ಹೌಸ್ಗೆಅಪಾಯವಿದೆ. ಸ್ಥಳೀಯರು ಆತಂಕಿತರಾಗಿದ್ದಾರೆ.
ಪೈಪ್ ಲೈನ್ ಹಾದುಹೋಗುವ ಪ್ರದೇಶಗಳಲ್ಲಿ ಇದೀಗ ಮಣ್ಣಿನ ಅಡಿಯಲ್ಲಿರುವ ಪೈಪ್ ಗಳು ಹೊರಗೆ ಕಾಣುತ್ತಿದೆ ಅದರ ಮೇಲೆ ಹಾಕಲಾಗಿದ್ದ ಮಣ್ಣು ಹಾಗೂ ಹೊದಿಕೆಗಳು ಮಳೆಗೆ ಕೊಚ್ಚಿಕೊಂಡು ಹೋಗಿದ್ದು ಅಪಾಯಕಾರಿ ಸ್ಥಿತಿ ಎದುರಾಗುತ್ತಿದೆ. ಇಲ್ಲಿ ಪೈಪ್ ಲೈನ್ಗಳಿಗೆ ಹಾನಿಯಾದರೆ ಅದು ತಿಳಿಯುವುದು ಅಸಾಧ್ಯವಾಗಿದೆ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು.