ಸುಳ್ಯ, ಆ 19: ಜೋಡುಪಾಲದಲ್ಲಿ ಗುಡ್ಡ ಕುಸಿತದಿಂದ ಜನಜೀವನ ತತ್ತರಗೊಂಡಿದೆ. ಧಾರಾಕಾರವಾಗಿ ಹರಿದು ಬರುತ್ತಿರುವ ಕೆಸರು ನೀರಿನ ನಡುವೆ ರಕ್ಷಣಾ ಕಾರ್ಯಾಚರಣೆ ಸಾಗಿದೆ. ಇನ್ನು ಗುಡ್ಡ ಕುಸಿತದ ಭೀತಿಗೊಳಗಾಗಿ ಗುಡ್ಡದಲ್ಲಿ ಆಶ್ರಯ ಪಡೆದಿದ್ದ ಉತ್ತರ ಭಾರತ ಮೂಲದ ಮೂವರು ಸಂತ್ರಸ್ತರನ್ನು ಭಾನುವಾರ ರಕ್ಷಣಾ ತಂಡ ರಕ್ಷಿಸಿದೆ. ಇವರು ಜೋಡುಪಾಲದ ರಬ್ಬರ್ ಎಸ್ಟೇಟ್ವೊಂದರ ಕಾರ್ಮಿಕರಾಗಿದ್ದು, ಉತ್ತರ ಭಾರತ ಮೂಲದ ಮೂವರು ಇಲ್ಲಿನ ಗುಡ್ಡದಲ್ಲಿ ಮರವೊಂದರ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಇವರನ್ನು ಭಾನುವಾರ ಪತ್ತೆಹಚ್ಚಿದ ಎನ್ಡಿಆರ್ಎಫ್, ಪೊಲೀಸರು ಹಾಗೂ ರಕ್ಷಣಾ ತಂಡ ಅಲ್ಲಿಂದ ಸಂಪಾಜೆ ಗಂಜಿ ಕೇಂದ್ರಕ್ಕೆ ಕರೆತಂದಿದೆ. ತೀರಾ ಅಸ್ವಸ್ಥರಾಗಿರುವ ಅವರಿಗೆ ಗಂಜಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ನಡುವೆ ಒಂದಷ್ಟು ಮನೆಯವರು ರಕ್ಷಣಾ ಕಾರ್ಯಚರಣೆಗೆ ಸ್ಪಂದಿಸ್ತಾ ಇಲ್ಲ ಎನ್ನುವ ದೂರುಗಳು ಕೂಡಾ ಕೇಳಿ ಬರುತ್ತಿದೆ. ಮನೆಯನ್ನು ಬಿಟ್ಟು ಹೊರ ಬರೋದಕ್ಕೆ ನಾಲ್ಕು ಕುಟುಂಬದವರು ನಿರಾಕರಿಸಿದ್ಧಾರೆ ಎನ್ನಲಾಗಿದೆ. ಸುಳ್ಯದ ಜೋಡುಪಾಲದಲ್ಲಿ ಎನ್ಡಿಆರ್ಎಫ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲಿಸರಿಂದ ರಕ್ಷಣಾ ಕಾರ್ಯಾಚರಣೆ ನಡಿತಾ ಇದೆ. ಆದರೆ ಸಂತ್ರಸ್ತರು ಸಹಕಾರ ನೀಡದೇ ಇರೋದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ಇನ್ನು ೧೨೦ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, 50 ರಷ್ಟು ಮನೆಗಳು ಸಂಪೂರ್ಣ ನೆಲಸಮವಾಗಿದೆ.