ಕಾಸರಗೋಡು, ಆ 19 : ಹಾಡಹಗಲೇ ವ್ಯಾಪಾರಿಯನ್ನು ಕೊಲೆಗೈದ ಪ್ರಕರಣದ ಆರೋಪಿಗೆ ಜೀವಾವಧಿ ಸಜೆ ಮತ್ತು ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಮಂಜೇಶ್ವರ ಉದ್ಯಾವರ ಹತ್ತನೇ ಮೇಲಿನ ಸುರೇಶ್ ( 51) ರವರನ್ನು ಕೊಲೆಗೈದ ಪ್ರಕರಣದ ಆರೋಪಿ ಮಂಜೇಶ್ವರ ಬಡಾಜೆಯ ಇಬ್ರಾಹಿಂ ಖಲೀಲ್ (32) ಗೆ ಶಿಕ್ಷೆ ವಿಧಿಸಲಾಗಿದೆ. ಜೀವಾವಧಿ ಸಜೆ ಹಾಗೂ ೫೦ ಸಾವಿರ ರೂ. ದಂಡ ವಿಧಿಸಲಾಗಿದೆ. 2015 ರ ಮಾರ್ಚ್ 16ರಂದು ಮಧ್ಯಾಹ್ನ ಘಟನೆ ನಡೆದಿತ್ತು. ಸುರೇಶ್ ಹೊಸಂಗಡಿಯಲ್ಲಿ ವಾಚ್ ಅಂಡ್ ವರ್ಕ್ಸ್ ನ ಮಾಲೀಕರಾಗಿದ್ದು, ಅಂಗಡಿಗೆ ಬಂದ ಈತ ಚೂರಿಯಿಂದ ಇರಿದು ಕೊಲೆಗೈದಿದ್ದನು .ಪೂರ್ವ ದ್ವೇಷ ಕೃತ್ಯಕ್ಕೆ ಕಾರಣವಾಗಿತ್ತು.
ಕೊಲೆಗೀಡಾದ ವ್ಯಾಪಾರಿ ಸುರೇಶ್
ವಿಚಾರಣೆ ಪೂರ್ಣಗೊಂಡು ತಿಂಗಳುಗಳು ಕಳೆದರೂ ತೀರ್ಪು ಹೊರ ಬೀಳಲಿಲ್ಲ. ನ್ಯಾಯಾಧೀಶರು ವರ್ಗಾವಣೆಯಾಗಿ ಹೋದುದರಿಂದ ವಿಳಂಬಗೊಂಡಿತ್ತು. ಇದರಿಂದ ಸುರೇಶ್ ನ ಸಂಬಂಧಿಕರುದ ಹೈಕೋರ್ಟ್ ಮೊರೆ ಹೋಗಿದ್ದರು. ಮೂರು ವಾರದೊಳಗೆ ತೀರ್ಪು ನೀಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಇದರಂತೆ ಕಾಸರಗೋಡು ಸೆಷನ್ಸ್ ನ್ಯಾಯಾಲಯ 14 ರಂದು ತೀರ್ಪು ನೀಡಲಿದೆ.