ಸುಳ್ಯ, ಆ 18: ಇಲ್ಲಿನ ಗಡಿಭಾಗದಲ್ಲಿ ಇರುವ ಕೊಡಗು ಜಿಲ್ಲೆ ವ್ಯಾಪ್ತಿಗೆ ಸೇರಿರುವ ಊರುಬೈಲು ಎಂಬಲ್ಲಿಯ ಹೊಳೆಯ ಸೇತುವೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕೊಚ್ಚಿ ಹೋದ ಘಟನೆ ನಡೆದಿದೆ. ಹೊಳೆಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿ ಮಳೆ ನೀರಿನಲ್ಲಿ ಸೇತುವೆ ಕೊಚ್ಚಿ ಹೋಗಿದೆ.
ಈ ಸೇತುವೆ ಸಮಸ್ಯೆ ಬಗ್ಗೆ ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ವಿವರವಾದ ವರದಿಯನ್ನು ಪ್ರಕಟಿಸಲಾಗಿತ್ತು. ಆದರೆ ಜನಪ್ರತಿನಿಧಿಗಳು ಹಾಗೂ ಇಲಾಖೆ ಇದರತ್ತ ಗಮನ ಹರಿಸಿಲ್ಲ. ಹೀಗಾಗಿ ಸೇತುವೆ ಇಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ಸೇತುವೆ ಮಖಾಂತರ, ಆನೆಹಳ್ಳ ಕಾಂತಬೈಲು ಇತರೆಡೆಗಳಿಗೆ ತೆರಳಬಹುದಾಗಿತ್ತು. ಇಲ್ಲಿ ಸುಮಾರು ೩೦೦ಕ್ಕೂ ಅಧಿಕ ಕುಟುಂಬಗಳಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ದಿನನಿತ್ಯ ಈ ಸೇತುವೆ ಮುಖಾಂತರ ಸಂಪರ್ಕ ಬೆಳೆಸುತ್ತಿದ್ದರು. ಇದೀಗ ಸ್ಥಳೀಯರಿಗೆ ಸಂಪರ್ಕ ಕೊಂಡಿ ಕಳಚಿದಂತಾಗಿದೆ.