ಮಂಗಳೂರು, ಆ.17: ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಉಳ್ಳಾಲ ಸಮೀಪದ ಉಳಿಯ ಧರ್ಮರಸರ ಕ್ಷೇತ್ರದ ಬಳಿ ನಡೆದಿದೆ.
ಉಳ್ಳಾಲ ಉಳಿಯ ಧರ್ಮರಸ ನಿವಾಸಿ ಅಶೋಕ್ ಡಿಸೋಜಾ (28) ಮೃತ ದುರ್ದೈವಿ.
ಬಿರುಗಾಳಿಗೆ ಹೈಟೆನ್ಷನ್ ತಂತಿಯೊಂದು ತುಂಡಾಗಿ ಬಿದ್ದಿತ್ತು. ಈ ಬಗ್ಗೆ ಅಶೋಕ್ ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಅಶೋಕ್ ಹೈಟೆನ್ಷನ್ ತಂತಿಯನ್ನು ಗಮನಿಸದೆ ಸ್ಪರ್ಶಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಶೋಕ್ ತಂತಿಯನ್ನು ಸ್ಪರ್ಶಿಸಿದ ವೇಳೆ ತಂತಿಯಲ್ಲಿ ವಿದ್ಯುತ್ ಹರಿಯುತ್ತಿದ್ದುದರಿಂದ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.
ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನಾ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.