ಬೆಳ್ತಂಗಡಿ, ಆ 17 : ಚಾರ್ಮಾಡಿ ಕಣಿವೆಯ ಐದನೇ ತಿರುವಿನಲ್ಲಿ ಗುಡ್ಡ ಕುಸಿಯುವ ಸನ್ನಿವೇಶ ನಿರ್ಮಾಣವಾಗಿದೆ. ಇಲ್ಲಿ ಸಂಪೂರ್ಣ ಕುಸಿತವುಂಟಾದರೆ ಚಾರ್ಮಾಡಿಘಾಟಿ ರಸ್ತೆಯೂ ಹಲವಾರು ದಿನಗಳ ಕಾಲ ಬಂದ್ ಆಗುವ ಭೀತಿಎದುರಾಗಲಿದೆ.
ಶಿರಾಡಿ ಮತ್ತಿತರಘಾಟಿ ರಸ್ತೆಗಳು ಬಂದ್ ಆಗಿರುವ ಪರಿಣಾಮ ಚಾರ್ಮಾಡಿ ಕಣಿವೆ ರಸ್ತೆಯಲ್ಲೀಗ ವಾಹನ ದಟ್ಟಣೆ ವಿಪರೀತವಾಗಿದೆ. ಇದರಿಂದ ಘಾಟಿ ರಸ್ತೆ ಅಲ್ಲಲ್ಲಿ ಕುಸಿಯುವ ಹಂತದಲ್ಲಿದೆ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಘಾಟಿಯ 5 ನೇ ತಿರುವಿನಲ್ಲಿ ಗುಡ್ಡವೊಂದರ ಸ್ಥಿತಿಯನ್ನು ನೋಡಿದರೆ ಭಯ ಹುಟ್ಟಿಸುವಂತಿದೆ. ಮೇಲಿನಿಂದ ವಾಹನಗಳು ಇನ್ನೊಂದು ವಾಹನಗಳಿಗೆ ದಾರಿ ಬಿಟ್ಟುಕೊಡುವ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯ ಅಡಿಭಾಗವೂ ಈಗಾಗಲೇ ಭಾಗಶಃ ಕುಸಿತ ಕಂಡಿದೆ. ಇದೆಲ್ಲಿಯಾದರೂ ಪೂರ್ತಿ ಕುಸಿತ ಕಂಡರೆರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳಲಿದೆ. ಮತ್ತೆ ಮರು ನಿರ್ಮಾಣಕ್ಕೆ ಬಹಳೇ ಸಮಯ ಹಿಡಿಯಲಿವೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.