ಕಾರ್ಕಳ, ಆ 17: ಕಲ್ಯಾ ಗರಡಿ ಮನೆಯೊಂದರಲ್ಲಿ ಸಂಬಂಧಿ ಯುವಕರಿಬ್ಬರು ಕ್ಷಣ ಮಾತ್ರದಲ್ಲಿ ಕುಸಿದು ಬಿದ್ದು ಪ್ರಾಣ ತೆತ್ತ ಘಟನೆ ಬುಧವಾರ ತಡ ರಾತ್ರಿ ಸಂಭವಿಸಿದೆ. ಗರಡಿ ಮನೆಯ ಪ್ರೀತೇಶ್ ನಿವಾಸದ ನವೀನ್(28), ಪ್ರೀತೇಶ್( 24) ಎಂಬವರು ಪ್ರಾಣ ಕಳೆದುಕೊಂಡವರು. ಬೋಳ ಬಿಎಸ್ಕೆಯಲ್ಲಿ ಉದ್ಯೋಗಿಯಾಗಿರುವ ನವೀನ್ ಹಾಗೂ ಉಡುಪಿ ಲೋಟಸ್ ಹೋಟೆಲ್ನ ಉದ್ಯೋಗಿ ಪ್ರೀತೇಶ್ ಸಾವಿಗೀಡಾದವರು. ಸಾವಿಗೀಡಾದ ನವೀನ್ನ ತಾಯಿ ಪ್ರೇಮರವರಾಗಿದ್ದು, ಅವರ ತಮ್ಮ ಶಂಕರನ ಮಗನೇ ಪ್ರೀತೇಶ್ ಆಗಿದ್ದಾನೆ. ಒಂದೇ ಮನೆಯಲ್ಲಿ ಎರಡು ಕುಟುಂಬ ವಾಸವಾಗಿದ್ದು, ನವೀನ್ ಮತ್ತು ಪ್ರೀತೇಶ್ ಅನ್ಯೋನ್ಯತೆಯಿಂದ ಇದ್ದರು. ಉದ್ಯೋಗಕ್ಕೆ ಹೊರತುಪಡಿಸಿ ಉಳಿದ ಕಡೆಗಳಿಗೆ ಹೋಗಿ ಬರುವಾಗಲು ಅವರಿಬ್ಬರು ಜೊತೆಯಾಗಿಯೇ ಹೋಗುತ್ತಿದ್ದರು. ರಾತ್ರಿ ಅವರಿಬ್ಬರು ಒಂದೇ ಕೋಣೆಯಲ್ಲಿ ಜೊತೆಯಾಗಿಯೇ ಮಲಗುತ್ತಿದ್ದರು.
ನೆಲಕ್ಕುರುಳಿ ಪ್ರಾಣ ಬಿಟ್ಟರು
ಬುಧವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಅವರಿಬ್ಬರು ಮನೆಯ ಹೊರಗಡೆ ಮಧ್ಯಪಾನ ನಿರತರಾಗಿದ್ದರು. ಇದಾಗಿ ಒಂದು ಗಂಟೆಯ ಬಳಿಕ ಅವರಿಬ್ಬರು ಮನೆಯೊಳಗೆ ಪ್ರವೇಶಿಸಿದ್ದಾರೆ. ಕ್ಷಣ ಮಾತ್ರದಲ್ಲಿ ನವೀನ್ ನೆಲೆಕುರುಳಿದ್ದಾರೆ. ಆತನ ಬೆನ್ನ ಹಿಂದಿದ್ದ ಪ್ರೀತೇಶ್ ಕೂಡಾ ನೆಲೆಕುರುಳಿ ಪ್ರಾಣ ಬಿಟ್ಟಿದ್ದಾರೆ.
ಸಣ್ಣಗಾತ್ರದ ಬಾಟಲಿ ಯಾವುದು?
ನವೀನ್ ಮತ್ತು ಪ್ರೀತೇಶ್ ಮದ್ಯ ಸೇವಿಸಿದ ಜಾಗದಲ್ಲಿ ಖಾಲಿ ಮದ್ಯದ ಬಾಟಲಿ ಪತ್ತೆಯಾಗಿದೆ. ಅದರ ಪಕ್ಕದಲ್ಲಿ ಸಣ್ಣ ಗಾತ್ರದ ಬಾಟಲ್ವೊಂದು ಪತ್ತೆಯಾಗಿದ್ದು, ಸುಗಂಧ ತುಂಬಿಸುವ ಸಣ್ಣ ಗಾತ್ರದ ಬಾಟಲ್ ಆಗಿತ್ತು. ಆತ್ಮಹತ್ಯೆ ನಿರ್ಧಾರ ಕೈಗೊಂಡ ಅವರು ಮದ್ಯ ಕುಡಿದು ನಶೆಯೇರಿದ ಬಳಿಕ ಸೈನೆಡ್ ಸೇವಿಸಿದರೆ ಎಂಬ ಶಂಕೆ ಇಲ್ಲಿ ಕಾಡುತ್ತಿದ್ದು, ಇದಕ್ಕೆ ಪುಷ್ಠಿ ನೀಡಿರುವಂತೆ ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಸಣ್ಣ ಗಾತ್ರದ ಬಾಟಲ್ ಆಗಿದೆ. ಘಟನಾ ಸ್ಥಳದಿಂದ ಪತ್ತೆಯಾದ ಸಣ್ಣ ಬಾಟಲ್ನ್ನು ಪೊಲೀಸರು ವಿಧಿ ವಿಜ್ಞಾಲಯಕ್ಕೆ ಕಳುಹಿಸಿದ್ದಾರೆ. ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಪೂರ್ಣ ಮಾಹಿತಿ ತಿಳಿಯಬಹುದಾಗಿದೆ.
ನೆಲಕ್ಕೆ ಉರುಳಿ ಬಿದ್ದಾಗ ದೇಹ ಮರಗಟ್ಟಿದವು
ಯುವಕರು ಯಾವುದೋ ವಿಷ ಪಾಶಣ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರೂ ಅಷ್ಟು ಬೇಗವಾಗಿ ಸಾಯುವ ಹಂತಕ್ಕೆ ತಲುಪಲಾರದು. ಇಲ್ಲಿ ಗಮನಿಸಬೇಕಾಗಿರುವುದೇನೆಂದರೆ ಸರಣಿಯಾಗಿ ನೆಲೆಕ್ಕೆ ಉರುಳಿದ ಯುವಕರಿಬ್ಬರು ಕ್ಷಣ ಮಾತ್ರದಲ್ಲಿ ಪ್ರಾಣ ಬಿಟ್ಟಿದರಲ್ಲದೇ ಅವರ ದೇಹ ಮರಗಟ್ಟಿದವು.
ಮೃತದೇಹ ತಾಲೂಕು ಸರಕಾರಿ ಆಸ್ಪತ್ರೆಗೆ ತಡರಾತ್ರಿಯಾಗುತ್ತಿದ್ದಂತೆ ಯುವಕರ ಮೃತದೇಹವನ್ನು ತಾಲೂಕು ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಲಾಗಿದೆ. ಅಲ್ಲಿ ಶವಮಹಜರು ನಡೆಸಲಾಗಿದ್ದು, ದೇಹದ ಹೊರಭಾಗದಲ್ಲಿ ಯಾವುದೇ ತರದಲ್ಲಿ ಗಾಯದ ಗುರುತುಗಳಾಗಲಿ ಕಂಡು ಬಂದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸುದಾಖಲಾಗಿದೆ.