ಸುಳ್ಯ, ಆ 16: ಸುಳ್ಯದ ಐವರ್ನಾಡು ಗ್ರಾಮದ ನಾಟಿಕೇರಿ ಎಂಬಲ್ಲಿರುವ ಪುಟ್ಟಣ್ಣ ಅವರಿಗೆ ಸೇರಿದ ಪೂರ್ಣೇಶ್ವರ ಸ್ಟೋರಿನಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯೂಟ್ ಉಂಟಾಗಿ ಅಪಾರ ವಸ್ತು ಮತ್ತು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಜೆರಾಕ್ಸ್ಮೆಷಿನ್, ಸಿಸಿ ಕ್ಯಾಮರಾ, ಕಂಪ್ಯೂಟರ್ ಇನ್ನಿತರ ಎಲೆಕ್ಟ್ರಾನಿಕ್ ಸಾಮಾಗ್ರಿಗಳು ಸುಟ್ಟು ಹೋಗಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಶಬ್ದಕೇಳಿ ಮನೆಯವರು ಎದ್ದುನೋಡಿದಾಗ ಉಪಕರಣ ಸುಟ್ಟುಹೋಗಿದ್ದವು. ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ನೀರು ಹಾಕಿ ಬೆಂಕಿಯನ್ನು ನಂದಿಸಲಾಯಿತು. ಸುಮಾರು 3 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.