ಕಾಸರಗೋಡು, ಆ 16: ವಿದ್ಯುತ್ ಲೈನ್ ದುರಸ್ಥಿ ಸಂದರ್ಭದಲ್ಲಿ ಶಾಕ್ ತಗುಲಿ ಕಂಬದಿಂದ ಎಸೆಯಲ್ಪಟ್ಟು ಲೈನ್ ಮೆನ್ ಮೃತಪಟ್ಟ ದಾರುಣ ಘಟನೆ ನಗರ ಹೊರವಲಯದ ಮೀಪುಗುರಿಯಲ್ಲಿ ಗುರುವಾರ ಸಂಜೆ ನಡೆದಿದೆ. ಮೃತಪಟ್ಟವರನ್ನು ನೆಲ್ಲಿಕುಂಜೆ ವಿದ್ಯುತ್ ಕಚೇರಿಯ ನೀಲೇಶ್ವರದ ಷಣ್ಮುಖ (೫೫) ಎಂದು ಗುರುತಿಸಲಾಗಿದೆ.
ಕಂಬಕ್ಕೆ ಹತ್ತಿ ದುರಸ್ತಿ ಗೊಳಿಸುತ್ತಿದ್ದಾಗ ಶಾಕ್ ಹೊಡೆದಿದ್ದು ನೆಲಕ್ಕೆ ಎಸೆಯಲ್ಪಟ್ಟ ಷಣ್ಮುಖರನ್ನು ಕೂಡಲೇ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.