ಬೆಂಗಳೂರು, ಆ 16: ಭಾರತದ ಮಾಜಿ ಪ್ರಧಾನಿ ಹಾಗೂ ರಾಜಕೀಯ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ನಿಧನ ಹಿನ್ನೆಲೆ ನಾಳೆ ಕರ್ನಾಟಕ ರಾಜ್ಯದಲ್ಲಿ ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಿಗೆ, ಬ್ಯಾಂಕ್, ಸರಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಮಾಜಿ ಪ್ರಧಾನಿಯವರಿಗೆ ಗೌರವಾರ್ಥ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜ ಅರ್ಧದಷ್ಟು ಹಾರಾಟ ಮಾಡುವಂತೆ ಸರಕಾರ ಆದೇಶ ನೀಡಿದೆ.
ಇನ್ನು ದೇಶಾದ್ಯಂತ 7 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ನಡೆಯಲಿದೆ. ನಾಳೆ ಸಂಜೆ ಮಾಜಿ ಪ್ರಧಾನಿಗಳ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ದೆಹಲಿಯ ಯಮುನಾ ನದಿ ತೀರದ ರಾಜ್ ಘಾಟ್ ನಲ್ಲಿ ನಡೆಯಲಿದೆ.