ಕೊಡಗು, ಆ16: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಡಿಕೇರಿ ತತ್ತರಿಸಿ ಹೋಗಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು ಕೆಲವು ಗ್ರಾಮಗಳು ದ್ವೀಪಗಳಂತಾಗಿದೆ. ಮಡಿಕೇರಿ ಮುತ್ತಪ್ಪ ದೇವಸ್ಥಾನ ಬಳಿಯಲ್ಲಿ ಭೂಕುಸಿತದಿಂದ ಮನೆ ನೆಲಕಚ್ಚಿದೆ. ಕಾಟಗೇರಿ ಗ್ರಾಮದಲ್ಲಿ ಭೂ ಕುಸಿತದಿಂದ ಯಶವಂತ್, ವೆಂಕಟರಮಣ, ಪವನ್ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಡಿಕೇರಿಯ ಬದಿಗೆರೆಯಲ್ಲಿ ಗ್ರಾಮ ಜಲಾವೃತವಾಗಿರುವ ಹಿನ್ನಲೆಯಲ್ಲಿ 200 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿ ಗುಡ್ಡ ಏರಿ ಕುಳಿತಿದ್ದಾರೆ. ಗುಡ್ಡವೂ ಕುಸಿಯುತ್ತಿದ್ದು ಜನರು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಜಿಲ್ಲಾಡಳಿತ ಹೆಲಿಕ್ಯಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲು ಮುಂದಾಗಿದೆ.