ಹೆಜಮಾಡಿ, ಆ 16: ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ವಿರೋಧಿಸಿ ಸಾರ್ವಜನಿಕರಿಂದ ಟೋಲ್ ಪ್ಲಾಝಾ ಮುತ್ತಿಗೆ ಹಾಕಿದ ಪ್ರಕರಣ ಸಂಭವಿಸಿದೆ. ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ನವಯುಗ ಕಂಪನಿಯವರು 16 ರ ಬೆಳಿಗ್ಗೆ ಏಕಾ ಏಕಿ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಮಾಹಿತಿಯಿಂದ ಬೆಳಿಗ್ಗೆಯಿಂದಲೇ ನೂರಾರು ಜನರು ಟೋಲ್ ಹತ್ತಿರ ಜಮಾಯಿಸಿರು. ವಿಷಯ ತಿಳಿದು ಕಾಪು ಸರ್ಕಲ್ ಹಾಲಾಮೂರ್ತಿ ರಾವ್ ಪಡುಬಿದ್ರಿ ಠಾಣಾಧಿಕಾರಿ ಸತೀಶ್ ಪೋಲೀಸ್ ರೊಂದಿಗೆ ಟೋಲ್ ವಸೂಲಿ ಕೇಂದ್ರಕ್ಕೆ ರಕ್ಷಣೆ ನೀಡಲು ಬಂದರು.
ಕರ್ನಾಟಕ ರಕ್ಷಣಾ ವೇದಿಕೆ, ಹೆಜಮಾಡಿ ನಾಗರಿಕ ಸಮಿತಿ ಸದಸ್ಯರು,ಮೂಲ್ಕಿ ಹಾಗೂ ಉಡುಪಿ ಟ್ಯಾಕ್ಸಿ ಯೂನಿಯನ್, ಮತ್ತು ಸ್ಥಳೀಯ ಜನಪ್ರತಿನಿಧಿ ಗಳು ಸೇರಿದರು. ಸ್ವಲ್ಪ ಕಾಲ ಪೋಲೀಸರೊಂದಿಗೆ ಮತ್ತು ಕಾಪು ತಹಶೀಲ್ದಾರರೊಂದಿಗೆ ಮಾತಿನ ಚಕಮುಕಿ ನಡೆಯಿತು. ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಆಗಮಿಸಿ ಜಿಲ್ಲಾಧಿಕಾರಿಗಳ ಜೊತೆ ಸಂಭಾಷಣೆ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಯವರು ನಾಳೆ ಸಂಘಟನೆ ಮುಖ್ಯಸ್ಥರು ಮತ್ತು ನವಯುಗ ಕಂಪನಿ ಮುಖ್ಯಸ್ಥರೊಡನೆ ಸಭೆ ನಡೆಯಲಿದೆ. ಅಲ್ಲಿ ತನಕ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಮಾಡುತ್ತಿಲ್ಲ ಎಂದು ಮಾಹಿತಿ ನೀಡಿದರು. ಸಾರ್ವಜನಿಕರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಿದರು.