ಮಂಗಳೂರು, ಅ 1: ಜಿಲ್ಲಾಡಳಿತ, ಭಾರತ ಸೇವಾದಳ ವತಿಯಿಂದ ಗಾಂಧಿ ಜಯಂತಿ ಕಾಯ೯ಕ್ರಮ ಇಂದು ಪುರಭವನ ಮುಂಭಾಗದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆಯಿತು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಶಾಸಕ ಜೆ.ಆರ್.ಲೋಬೋ ಗಾಂಧಿ ಜಯಂತಿ ಇಂದು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಹಿರಿಯರು- ಕಿರಿಯರೆನ್ನದೆ ಎಲ್ಲರೂ ಕೂಡಾ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸೋದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಭಾರತ ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ತಹಶಿಲ್ದಾರ್ ಗುರುಪ್ರಸಾದ್, ಸೇವಾದಳದ ಫ್ರಾನ್ಸಿಸ್, ಮಂಜೇಗೌಡ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಪೌರಕಾಮಿ೯ಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರುದ್ರಪ್ಪ ಅವರನ್ನು ಗೌರವಿಸಲಾಯಿತು.ಗಾಂಧಿ ಜಯಂತಿ ಪ್ರಯುಕ್ತ ವಾತಾ೯ ಮತ್ತು ಸಾವ೯ಜನಿಕ ಸಂಪರ್ಕ ಇಲಾಖೆಯು ಹೊರತಂದ ಜನಪದ ವಿಶೇಷಾಂಕವನ್ನು ಶಾಸಕರು ಬಿಡುಗಡೆಗೊಳಿಸಿದರು.ನಂತರ ಪುರಭವನದಲ್ಲಿ ಗಾಂಧೀ ಭಜನೆಗಳ ಹಾಗೂ ಗಾಂಧೀಜಿಯವರ ಪ್ರಿಯವಾದ ಭಕ್ತಿಗೀತೆಗಳ ಗಾಯನ ನಡೆಯಿತು.