ಮಂಗಳೂರು, ಅ16: ನಗರದ ಪಾಂಡೇಶ್ವರ ಶಿವನಗರ ಶಾಂತ ಆಳ್ವರ ಸಮಾಧಿ ಬಳಿ ಶಿವನಗರ ನಾಗರಿಕ ಸಮಿತಿ ಉದ್ಘಾಟನೆ ಹಾಗೂ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಮತ್ತು ದಿ.ರಮಾಂಭ ಬಿ. ಎಲ್. ಎನ್. ರೈ ಉದ್ಯಾನವನ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಧ್ವಜಾರೋಹಣವನ್ನು ಕಾರ್ಪೋರೇಟರ್ ಪ್ರೇಮಾನಂದ ಶೆಟ್ಟಿ ನೆರವೇರಿಸಿ, ಉದ್ಯಾನವನ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಗರ ಪಾಲಿಕೆ ವತಿಯಿಂದ ನೀಡಲು ಬದ್ಧರಿರುವುದಾಗಿ ಭರವಸೆ ನೀಡಿದರು.
ನಾಗರಿಕ ಸಮಿತಿಯನ್ನು ಕಾರ್ಪೋರೇಟರ್ ದಿವಾಕರ ಉದ್ಘಾಟಿಸಿದರು. ಎಮ್ಮೆಕೆರೆ ರಮಾಲಕ್ಷ್ಮೀನಾರಾಯಣ ಹಾಲ್ನ ಮಾಲಕ ಪರೀಕ್ಷಿತ್ ರೈ ಉದ್ಯಾನವನ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಿವನಗರ ನಾಗರಿಕ ಸಮಿತಿ ಅಧ್ಯಕ್ಷ ಉದ್ಯಮಿ ಪ್ರಕಾಶ್ ಬಿ ಎನ್ ಮಾತನಾಡಿ, ಪ್ರಸ್ತುತ ಮಳೆಗಾಲದ ಸಂದರ್ಭದಲ್ಲಿ ಗಿಡಗಳಿಗೆ ನೀರು ಹಾಕದಿದ್ದರೂ ಬೆಳೆಯಬಲ್ಲದು. ಆದರೆ ಬೇಸಗೆಕಾಲದಲ್ಲಿ ಉದ್ಯಾನವನದಲ್ಲಿರುವ ಸಸಿಗಳಿಗೆ ನೀರು ಹಾಕಿ ಪೋಷಿಸುವ ಮೂಲಕ ಪರಿಸರದ ಜನತೆ ಪರಿಸರ ಕಾಳಜಿ ತೋರಬೇಕು ಎಂದರು. ಅಲ್ಲದೆ ಪರಿಸರವನ್ನು ಸ್ವಚ್ಛಮಾಡುವ ಮೂಲಕ ನಮ್ಮ ಮನೆಯಂಗಳದಿಂದಲೇ ಎಲ್ಲರೂ ಮನಸ್ಸು ಮಾಡಿ ಸ್ವಚ್ಛತೆಯತ್ತ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾದ ಶಿವನಗರ ನಾಗರಿಕ ಸಮಿತಿ ಉಪಾಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಮಾಲತಿ ಸಂತೋಷ್ಕುಮಾರ್ ಶೆಟ್ಟಿ, ಸಂತೋಷ್ ರೈ, ರಶಿಕಾ ರೈ ಮೊದಲಾದವರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಬಸವರಾಜ್, ಜಯಂತ್, ರಾಜೇಶ್, ಕೆ ಸಿ ಜನಾರ್ದನ್, ಯಶವಂತ್ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.