ಮಂಗಳೂರು, ಆ 16: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ-ಗಾಳಿ ಸುರಿಯುತ್ತಿದ್ದು, ಮಳೆ ನೀರಿನಿಂದಾಗಿ ನದಿ-ಹೊಳೆಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ನದಿ ಪಾತ್ರಗಳಲ್ಲಿ ಪ್ರವಾಹ ಸೃಷ್ಟಿಸಿದೆ. ಬಂಟ್ವಾಳ ಮತ್ತು ಸುಳ್ಯ ತಾಲೂಕಿನ ಎಲ್ಲಾ ಶಾಲೆಗಳಿಗೆ ಇಂದು (ಆಗಸ್ಟ್ 16) ರಜೆ ಘೋಷಿಸಿ ತಹಶೀಲ್ದಾರ್ ಆದೇಶಿಸಿದ್ದಾರೆ. ಮಳೆ ಅಬ್ಬರ ಮತ್ತೆ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಈ ರಜೆ ಘೋಷಿಸಲಾಗಿದೆ. ಈ ನಡುವೆ ಬಂಟ್ವಾಳ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಮತ್ತೆ ಏರಿಕೆ ಕಂಡಿದೆ. ಇಂದು ನೇತ್ರಾವತಿಯ ಹರಿವು 8.6 ಮೀಟರ್ ಎತ್ತರದಲ್ಲಿತ್ತೆಂದು ವರದಿಯಾಗಿದೆ.ನದಿ ಪ್ರವಾಹದಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಮುಖ್ಯ ರಸ್ತೆಗಳು ಬಂದ್ ಆಗಿವೆ.
ಇನ್ನೊಂದೆಡೆ ಮಳೆ ಆರ್ಭಟದಿಂದ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಇಂದು ರಜೆ ನೀಡಿವಂತೆ ಪ್ರಭಾರ ಜಿಲ್ಲಾಧಿಕಾರಿ ಎನ್. ದೇವಿದಾಸ್ ಈ ಕುರಿತು ಆದೇಶಿಸಿದ್ದಾರೆ.