ಆ,15: ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ನಡುವೆ ಆಮ್ ಆದ್ಮಿ ಪಕ್ಷಕ್ಕೆ ಆಘಾತ ಎದುರಾಗಿದೆ. ಇದು ಅರವಿಂದ ಕ್ರೇಜಿವಾಲ್ ತೀವ್ರ ಹಿನ್ನಡೆಯಾಗಿದೆ. ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಆಶುತೋಷ್ ಅವರು ವೈಯಕ್ತಿಕ ಕಾರಣಗಳಿಂದ ಪಕ್ಷದಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ, ಹೀಗಾಗಿ, ಎಎಪಿ ತೊರೆಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಪತ್ರಕರ್ತರಾಗಿದ್ದ ಆಶುತೋಷ್(53) ಅವರು ರಾಜಕೀಯಕ್ಕೆ ಸೇರ್ಪಡೆಗೊಂಡು 2014ರ ಲೋಕಸಭೆ ಚುನಾವಣೆಯನ್ನು ಐತಿಹಾಸಿಕ ಚಾಂದಿನಿ ಚೌಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಶುತೋಷ್ ಅವರ ರಾಜೀನಾಮೆ ಬಗ್ಗೆ ಆಪ್ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ಮೂಲಗಳು ತಿಳಿಸಿವೆ. ತಮ್ಮ ರಾಜೀನಾಮೆ ಕುರಿತು ಟ್ವೀಟ್ ಮಾಡಿರುವ ಅಶುತೋಷ್ , ಪ್ರತಿಯೊಂದು ಯಾತ್ರೆಯೂ ಕೊನೆಗೊಳ್ಳಬೇಕಾಗಿದೆ.ಆಪ್ ಜತೆಗಿನ ಸುಂದರ ಮತ್ತು ಕ್ರಾಂತಿಕಾರಿ ಪಯಣ ಕೊನೆಗೊಂಡಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.