ಮಂಗಳೂರು, ಆ 14: ರಾಜ್ಯದ ಕರಾವಳಿ, ಕೊಡಗು, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ತಗ್ಗು ಪ್ರದೇಶಗಳು ನೀರಿನಿಂದ ಅವೃತ್ತವಾಗಿದ್ದು ಜನ ಪರದಾಡುವಂತಾಗಿದೆ. ಇನ್ನು ಸಕಲೇಶಪುರ ತಾಲೂಕಿನ ಎಡಕುಮೇರಿ ಸಮೀಪದ ಅರೆಭಟ್ಟ ಪ್ರದೇಶದಲ್ಲಿ ಹಳಿಯ ಮೇಲೆ ಗುಡ್ಡ ಕುಸಿತ ವಾಗಿದ್ದು ಮಂಗಳೂರು- ಬೆಂಗಳೂರು ರೈಲು ಸಂಚಾರ ಸ್ಥಗಿತವಾಗಿದೆ.
ಪಶ್ಚಿಮ ಘಟ್ಟದಲ್ಲಿ ಭಾರೀ ಭೂಕುಸಿತವಾಗುತ್ತಿದ್ದು ಹಳಿಗಳ ಮೇಲೆ ನಿರಂತರವಾಗಿ ಮಣ್ಣು ಬೀಳುತ್ತಿರುವುದರಿಂದ ಈ ಭಾಗದ ಎಲ್ಲಾ ರೈಲು ಸೇವೆಗಳನ್ನು ಮೂರು ದಿನಗಳ ಸ್ಥಗಿತಗೊಳಿಸುವ ಸಾಧ್ಯತೆ ಇದೆ.