ಬೈಂದೂರು, ಆ14: ಬಂದರು ವ್ಯಾಪ್ತಿ ಸೇರಿದಂತೆ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮೀನುಗಾರರೂ ಹಾಗೂ ಕೃಷಿಕರು ಅಪಾರ ನಷ್ಟ ಉಂಟುಮಾಡಿದೆ. ಇಲ್ಲಿನ ಶಿರೂರು ಅಳ್ವೆಗದ್ದೆ ಬಂದರಿನಲ್ಲಿ ಲಂಗರು ಹಾಕಿದ ಆರು ದೋಣಿ ಹಾಗೂ ಎರಡು ಪರ್ಷಿಯನ್ ಬೋಟ್ ನೀರಿನಲ್ಲಿ ಕೊಚ್ಚಿ ಸಮುದ್ರ ಪಾಲಾಗಿದ್ದು ಬಳಿಕ .ಅವುಗಳು ಸಮೀಪದ ಕಳಿಹಿತ್ಲು ಕಡಲ ಕಿನಾರೆಯ ದಡಕ್ಕೆ ತೇಲಿ ಬಂದಿದ್ದು, ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ಹರಸಾಹಸದಿಂದ ದೋಣಿಗಳನ್ನು ಹಗ್ಗ ಕಟ್ಡಿ ದಡಕ್ಕೆ ತರಲಾಯಿತು.
ದೋಣಿ ಹಾಗೂ ಇಂಜಿನ್ ಸಂಪೂರ್ಣ ಹಾನಿಯಾಗಿದ್ದು ಸುಮಾರು ಒಂದು ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ. ಈ ಘಟನೆ ಇನ್ನಷ್ಟೆ ಮೀನುಗಾರಿಕೆ ಪ್ರಾರಂಭಿಸಬೇಕಾದ ಮೀನುಗಾರರಿಗೆ ಮತ್ತಷ್ಟು ಆತಂಕ ಉಂಟು ಮಾಡಿದೆ .ಉಪ್ಪುಂದ 3 ಸಾಗರ ದೀಪ ದೋಣಿ , 3 ಬಬ್ರಿಹಿಂಡ್ ಪ್ರಸಾದ ದೋಣಿ ಹಾಗೂ ಶಿರೂರಿನ ಸ್ಥಳೀಯರ 1 ಬೋಟ್ ,ಸೋಡಿಗದ್ದೆ ಸಮೀಪದ 1 ಬೋಟ್ ಹಾನಿಯಾಗಿದೆ.