ಕಾಸರಗೋಡು, ಆ 14: ಮನೆಗೆ ಬೀಗ ಹಾಕಿ ತೆರಳಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು 130 ಪವನ್ ಚಿನ್ನಾಭರಣ ಮತ್ತು 35 ಸಾವಿರ ರೂ . ರೂ ನಗದು ಕಳವು ಗೈದ ಘಟನೆ ಕಾಞo ಗಾಡ್ ಕುಶಾಲನಗರದಲ್ಲಿ ನಡೆದಿದೆ. ಕುಶಾಲ ನಗರದ ಎಂ.ವಿ ಸಲೀಂ ಎಂಬವರವರ ಮನೆಯಲ್ಲಿ ಕಳವು ನಡೆದಿದೆ. ಮನೆಯವರು ಎರಡು ದಿನಗಳ ಹಿಂದೆ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದರು . ಭಾನುವಾರ ಸಂಜೆ ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಮನೆಯ ಹಿಂಬದಿಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕೊಠಡಿಯಲ್ಲಿದ್ದ ಕಪಾಟಿನ ಬೀಗ ಒಡೆದು ಕಳವು ಮಾಡಲಾಗಿದೆ.
ಪರಿಚಿತರ ಕೃತ್ಯದ ಬಗ್ಗೆ ಸಂಶಯ
ಸಲೀಂ ಹಾಗೂ ಸುಲ್ಫಾನಾ ಅವರ ವಿವಾಹ ಮೂರು ತಿಂಗಳ ಹಿಂದೆ ನಡೆದಿದ್ದು, ಮನೆಯವರು ಸಂಬಂಧಿಕರಲ್ಲಿ ತೆರಳಿರುವ ಬಗ್ಗೆ ಸ್ಪಷ್ಟ ಮಾಹಿತಿಯಿದ್ದವರೇ ಕಳವು ನಡೆಸಿರುವ ಸಾಧ್ಯತೆಯಿರುವುದಾಗಿ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕಳವಾಗಿರುವ ಚಿನ್ನಭರಣ ಸುಲ್ಫಾನಾ ಅವರಿಗೆ ಸೇರಿದ್ದಾಗಿದೆ. ಕಪಾಟಿನನಲ್ಲಿ ಇನ್ನೊಂದೆ ಡಬ್ಬದಲ್ಲಿದ್ದ ಗಿಲೀಟಿನ ಅಭರಣಗಳನ್ನು ಬಿಟ್ಟು ಹೋಗಿದ್ದಾರೆ
ಹೊಸದುರ್ಗ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು. ಕಾಸರಗೋಡಿನಿಂದ ಬೆರಳಚ್ಚು ತಜ್ಞರು ಮತ್ತು ಶ್ವಾನದಳದವರು ಇಂದು ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ತನಿಖೆ ಆರಂಭಿಸಿದ್ದಾರೆ. ಬೆರಳಚ್ಚು ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ.